Coastal Bulletin

ಬಂಟ್ವಾಳ: ಬಂಟ್ವಾಳ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಹಾಗೂ ಚಿಣ್ಣರಲೋಕ ಸೇವಾಬಂಧು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆಯಲಿರುವ ಕರಾವಳಿ ಕಲೋತ್ಸವದ ಮೆರವಣಿಗೆಗೆ ಪೊಲೀಸ್‌ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಚಾಲನೆ ನೀಡಿದರು.

ಬಳಿಕ ವಿವಿಧ ಕಲಾ ತಂಡಗಳಿಂದ ಗೋಲ್ಡನ್ ಪಾರ್ಕ್ ಮೈದಾನದವರೆಗೆ ಅದ್ದೂರಿಯ ಮೆರವಣಿಗೆ ನಡೆಯಿತು. ಚಿಣ್ಣರ ಅಧ್ಯಕ್ಷೆ ಸಾನ್ವಿ ಸುಧೀರ್ ಶೆಟ್ಟಿ, ಮೊಡಂಕಾಪು ಇನೆಂಟ್ ಜೀಸಸ್ ಶಾಲೆಯ ಮುಖ್ಯಸ್ಥ ಫಾ| ಮೆಲ್ವಿನ್ ಲೋಬೊ, ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್, ಸಂಚಾಲಕ ಮೋಹನದಾಸ ಕೊಟ್ಟಾರಿ, ಗೌರವಾಧ್ಯಕ್ಷ ಜಯರಾಮ ರೈ, ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ತುಂಬೆ, ಪ್ರಮುಖರಾದ ಇಬ್ರಾಹಿಂ ಕೈಲಾರ್, ರಾಜ ಚಂಡ್ತಿಮಾರ್,

ಜ್ಯೋತಿ ಮಾರ್ಟಿಸ್, ಶಶಿಧರ್ ಆಚಾರ್ಯ, ಪುಷ್ಪಲತಾ ಶೆಟ್ಟಿ, ಸೌಮ್ಯ ಭಂಡಾರಿಬೆಟ್ಟು, ದೇವಪ್ಪ ಕುಲಾಲ್ ಪಂಜಿಕಲ್ಲು, ವಿಶಾಲಾಕ್ಷಿ, ಸ್ವಜೇಶ್‌ಕುಮಾರ್, ಅಕ್ಷತಾ ಮಳಲಿ ಮೊದಲಾದವರು ಪಾಲ್ಗೊಂಡಿದ್ದರು.


 ಈ ಸಂದರ್ಭದಲ್ಲಿ ನಾಸಿಕ್ ಬ್ಯಾಂಡ್,ಗೊಂಬೆ, ಹುಲಿ ವೇಷ, ಕೇರಳ ಚೆಂಡೆ, ಬಣ್ಣದ ಕೊಡೆ, ಬ್ರಹತ್ ಗಾತ್ರದ ಹುಲಿ, ಹನುಮಂತ, ವಿದ್ಯಾರ್ಥಿಗಳ ಪಥಸಂಚಲನ, ಕಲಸದೊಂದಿಗೆ ಮಾತೆಯರು ಮೆರವಣಿಗೆಗೆ ವಿಶೇಷ ಮೆರಗು ನೀಡಿದರು.

Leave a Comment