ಬಂಟ್ವಾಳ: ಭಾ ಜ ಪಾ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ.

Coastal Bulletin
ಬಂಟ್ವಾಳ: ಭಾ ಜ ಪಾ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ.

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯು ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಡಿ. 20ರಂದು ಶನಿವಾರ ನಡೆಯಿತು.

ಸಭೆಯನ್ನು ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಂದೇ ಮಾತರಂ 150ವರ್ಷ ಪೂರೈಸಿದ ಹಿನ್ನಲೆ ಹಾಗೂ ಅಟಲ್ ಜನ್ಮ ಶತಾಬ್ದಿಯ ಈ ವಿಶೇಷ ವರ್ಷದ ಸಂಭ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 3ನೇ ಬಾರಿ ಅಧಿಕಾರಕ್ಕೆ ಬಂದು ವಿಕಸಿತ ಭಾರತದ ಕಲ್ಪನೆಯಡಿಯಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಅಕ್ಷರಶಃ ನಿಜ ಮಾಡಿ,ವೈಚಾರಿಕ ವಿಚಾರಕ್ಕೆ ಬದ್ದವಾಗಿ ಅನೇಕ ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು .

ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯ ಆಡಳಿತ ನಡೆಸುತ್ತಿದೆ, ಬಡ ಜನರ ಬಗ್ಗೆ ಅನುಕಂಪ, ಕಾಳಜಿ ಇಲ್ಲದ ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಕೇಂದ್ರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ವಿರೋಧ ವ್ಯಕ್ತಪಡಿಸಿದೆ ಎಂದರು.

ಕರಾವಳಿ

ಜನರು ಬೆಂಕಿ ಹಚ್ಚುವವರು ಎಂದು ಲೇವಡಿ ಮಾಡಿ ಕರಾವಳಿಯ ಬಗ್ಗೆ ಮಲತಾಯಿ ದೋರಣೆ ತೋರುವ ಕಾಂಗ್ರೆಸ್ ರಾಹುಲ್ ಗಾಂದಿಯ ಆಶೀರ್ವಾದಕ್ಕಾಗಿ ಹಿಂದೂ ಸಮಾಜವನ್ನು ದ್ವೇಷಿಸುತ್ತಿದೆ, ಬೆಂಕಿ ಹಚ್ಚುವವರು ಯಾರು ಎಂದು ನಾವು ತೋರಿಸಿಕೊಟ್ಟು, ಕಾಂಗ್ರೆಸ್ ಮಾನಸಿಕತೆಗೆ ಅಂತ್ಯ ಹಾಡಬೇಕಿದೆ ಎಂದರು.

ಸಂವಿಧಾನ, ನ್ಯಾಯಾಂಗ, ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ನಂಬಿಕೆ ಇರುವ ನಾವು ದೇಶದ ನಾಗರಿಕರಲ್ಲದವರಿಗೆ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ನಿರಾಕರಿಸುವುದರ ಜೊತೆ ದೇಶದಿಂದ ಹೊರಕ್ಕೆ ಕಳುಹಿಸುವ ವ್ಯವಸ್ಥೆ ಮಾಡುವುದಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ‌ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಬಿಜೆಪಿ ಜಿಲ್ಲಾ ಸಮಿತಿ ಪ್ರಮುಖರಾದ ಪ್ರೇಮನಾಂದ ಶೆಟ್ಟಿ, ಯತೀಶ್ ಆರ್ವರ್, ,ಪೂಜಾ ಪೈ, ದೇವಪ್ಪ ಪೂಜಾರಿ,ದಿನೇಶ್ ಅಮ್ಟೂರು,ಸುದರ್ಶನ ಬಜ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಹರೀಶ್ ಶೆಟ್ಟಿ ಪಡು ಕಾರ್ಯಕ್ರಮ ನಿರೂಪಿಸಿದರು.

Leave a Comment