ಜ.1ರಂದು ಮೊಗರ್ನಾಡು ದೇವ ಮಾತೆಯ ದೇವಾಲಯದ 250ನೇ ಜ್ಯುಬಿಲಿ ಆಚರಣೆ ಕಾರ್ಯಕ್ರಮ.

Coastal Bulletin
ಜ.1ರಂದು ಮೊಗರ್ನಾಡು ದೇವ ಮಾತೆಯ ದೇವಾಲಯದ 250ನೇ ಜ್ಯುಬಿಲಿ ಆಚರಣೆ ಕಾರ್ಯಕ್ರಮ.

ಬಂಟ್ವಾಳ: ಮೊಡಂಕಾಪು ಬಾಲಯೇಸುವಿನ ಧರ್ಮಕೇಂದ್ರದಿಂದ ಬೆರ್ಪಟ್ಟು ಕ್ರಿ ಶ 1775ಕ್ಕೆ ಆಮ್ಟೂರು, ನರಿಂಗಾನ ಎಂಬಲ್ಲಿ ಸ್ಥಾಪನೆಯಾಗಿ ಕಾರ್ಯಾಚರಿಸಲು ಪ್ರಾರಂಬಿಸಿ ಸರಿ ಸುಮಾರು 250 ವರುಷಗಳನ್ನು ಪೂರೈಸಿದ ಅಂಗವಾಗಿ ಮೊಗರ್ನಾಡು ದೇವ ಮಾತೆಯ ದೇವಾಲಯದಲ್ಲಿ 250ನೇ ಜ್ಯುಬಿಲಿ ಆಚರಣೆ ಕಾರ್ಯಕ್ರಮ ಜ.1 ರಂದು ನಡೆಯಲಿದೆ ಎಂದು ಮೊಗರ್ನಾಡು ದೇವ ಮಾತೆಯ ದೇವಾಲಯದ ಪ್ರಧಾನ ಧರ್ಮಗುರು ಅನಿಲ್ ಕೆನ್ಯೂಟ್ ಡಿ.ಮೆಲ್ಲೊ ಹೇಳಿದರು.

ಅವರು ಡಿ. 20ರಂದು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,250 ವರ್ಷಗಳ ಅವಧಿಯಲ್ಲಿ ದೇವಾಲಯವು ಸಮಗ್ರ ಮಾನವ ಅಭಿವೃದ್ದಿಗೆ ಮಹತ್ವದ ಕೊಡುಗೆ ನೀಡಿದ್ದು ವಿಶೇಷವಾಗಿ ಶಿಕ್ಷಣ, ಸಾಮಾಜಿಕ ಸೇವೆ,ಆಧ್ಯಾತ್ಮಿಕ ಸೇವೆ,ಆರೋಗ್ಯ ಸೇವೆ, ಕೌಟುಂಬಿಕ ಸೇವೆ,ಕೃಷಿ ಮತ್ತು ಪರಿಸರ ಹಾಗೂ ಜಾಗೃತಿ ಕಾರ್ಯಕ್ರಮಗಳ ಅಮೂಲ್ಯ ಸೇವೆಗಳನ್ನು ನಿರಂತರವಾಗಿ ಎಲ್ಲಾ ಜಾತಿ, ಮತ ಹಾಗೂ ಧರ್ಮದ ಜನರಿಗೆ ನೀಡಿ ಜನರ ಜೀವನಮಟ್ಟವನ್ನು ಉಜ್ವಲಗೊಳಿಸಿದೆ ಎಂದರು.

ದೇವಾಲಯ 250ವರ್ಷ ಪೂರೈಸಿದ ಅಂಗವಾಗಿ ಡಿಸೆಂಬರ್ 2024 ರಂದು, 2025ನೇ ವರ್ಷವನ್ನು ಜ್ಯುಬಿಲಿ ವರ್ಷವಾಗಿ ಉದ್ಘಾಟಿಸಿ ನಂತರ ಪ್ರತಿ ತಿಂಗಳು ವಿವಿಧ ಜ್ಯುಬಿಲಿಗಳನ್ನು ಆಚರಿಸಲಾಯಿತು ಎಂದರು.

ಡಿ 28 ರಂದು ಕೆ.ಸಿ. ರಸ್ತೆಯಿಂದ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. 250ನೇ ಜ್ಯುಬಿಲಿಯ ಸಮಾರೋಪ ಸಮಾರಂಭವು 1 ಜನವರಿ 2026 ರಂದು ನಡೆಯಲಿದ್ದು, ಸಮಾರಂಭವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ!ವಂ!ಡಾ ಪೀಟರ್ ಪಾವ್ ಸಲ್ದಾನಾ ಅವರ ಅಧ್ಯಕ್ಷತೆಯಲ್ಲಿ ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸಲಿದ್ದು,250ಕ್ಕಿಂತಲೂ ಹೆಚ್ಚು ಧರ್ಮ ಗುರುಗಳು ಈ ಬಲಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅದೇ ದಿನ ಸಂಜೆ 6:00ಗೆ ಚರ್ಚ್ ಆವರಣದ ಮೈದಾನದಲ್ಲಿ 250ನೇ ಜುಬಿಲಿ

ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ಆಗಿರುವಂತಹ ವಂದನೀಯ ಪೀಟರ್ ಪಾಲ್ ಸಲ್ದಾನ ರವರು ವಹಿಸಲಿದ್ದಾರೆ. ಅದೇ ರೀತಿಯಲ್ಲಿ ಮುಖ್ಯ ಅತಿಥಿಗಳಾಗಿ ಅತಿ ವಂದನೀಯ ಫಾದ‌ರ್ ಐವನ್ ಮೈಕಲ್ ರೊಡ್ರಿಗಸ್, ಅತಿ ವಂದನೀಯ ಫಾದರ್ ಸ್ಟೇನಿ ಡಿಸೋಜ ರೆವೆರೆಂಡ್. ಅತಿ ವಂಡನೀಯ ಸಿಸ್ಟ‌ರ್ ಕ್ಲಾರಾ ಮಿನೇಜಸ್, ಗೌರವ ಅತಿಥಿಗಳಾಗಿ ಅತಿ ವಂದನೀಯ ಫಾದರ್ ಪೀಟರ್ ಅರುನ್ಹಾ, ಅತಿ ವಂದನೀಯ ಫಾದರ್ ಆಯೋ ಲೋಬೋ, ಅತಿ ವಂದನೀಯ ಡಾ. ಮಾರ್ಕ್ ಕ್ಯಾಸ್ತಲಿನೊ ರೆವೆರೆಡ್ ಫಾದರ್ ಪಾವು ಪಿಂಟೊ, ಜೊತೆಗೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸರ್ವ ಆಯೋಗಗಳ ಸಂಯೋಜಕರು, ಧರ್ಮ ಭಗನಿಯರು, ಚರ್ಚ್ ಪಾಲನಾ ಆರ್ಥಿಕ ಮಂಡಳಿಯ ಸದಸ್ಯರು, ಜ್ಯುಬಿಲಿ ಸಮಿತಿಯ ಸಂಚಾಲಕರು ಹಾಗೂ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೊಗರ್ನಾಡು ದೇವ ಮಾತೆಯ ದೇವಾಲಯದ ಉಪಾಧ್ಯಕ್ಷ ಸಂತೋಷ್ ಡಿ.ಸೋಜ, ಕಾರ್ಯದರ್ಶಿ ವಿಲ್ ಫ್ರೆಡ್ ಲೋಬೋ,ಸರ್ವ ಆಯೋಗಗಳ ಸಂಚಾಲಕಿ ಎಮಿಲಿಯಾನ ಡಿ.ಕುನ್ಹಾ, ಪ್ರಚಾರ ಸಮಿತಿಯ ಸಂಚಾಲಕ ರೋಶನ್ ಬರ್ಬೊಜ, ಜ್ಯಬಿಲಿ ಸಮಿತಿಯ ಸಂಚಾಲಕ ಸವೀನ್ ಉಪಸ್ಥಿತರಿದ್ದರು.

Leave a Comment