Coastal Bulletin

ಬಂಟ್ವಾಳ :ತಾಲ್ಲೂಕಿನಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ ಅರ್ಹ 63 ಕುಟುಂಬಗಳಿಗೆ ಸರಕಾರದಿಂದ ಮಂಜೂರಾದ ತಲಾ ರೂ 1ಲಕ್ಷ ಮೊತ್ತದ ಪರಿಹಾರಧನ ಚೆಕ್ಕನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಭಾನುವಾರ ವಿತರಿಸಿದರು.

ತಾಲ್ಲೂಕಿನಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ ಅರ್ಹ 63 ಕುಟುಂಬಗಳಿಗೆ ಸರಕಾರದಿಂದ ಮಂಜೂರಾದ ಪರಿಹಾರಧನ ಚೆಕ್ಕನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಭಾನುವಾರ ವಿತರಿಸಿದರು. 

ಈಗಾಗಲೇ ಒಟ್ಟು 216 ಅರ್ಜಿ ಸ್ವೀಕಾರಗೊಂಡಿದ್ದು, ಈ ಪೈಕಿ 192 ಅರ್ಜಿ ಸಿಂಧುವಾಗಿದೆ. ಇದೀಗ 63 ಕುಟುಂಬಗಳಿಗೆ ಸರಕಾರವು ಮೊದಲ ಕಂತು ಬಿಡುಗಡೆಗೊಳಿಸಿದೆ ಎಂದು ಶಾಸಕ ರಾಜೇಶ ನಾಯ್ಕ್ ತಿಳಿಸಿದರು.  

 ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಉಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಮೈರ, ವೀರಕಂಭ

ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ಬರಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಸದಾಶಿವ ಬರಿಮಾರು, ಅಮ್ಮುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಮನ ಆಚಾರ್ಯ, ರಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಮಂಚಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋಹನದಾಸ್, ನರಿಕೊಂಬು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಮಡಿಮುಗೆರು, ಪುರಸಭಾ ಸದಸ್ಯೆ ಮೀನಾಕ್ಷಿ, ಉಪ ತಹಶೀಲ್ದಾರ್ ನರೇಂದ್ರನಾಥ್ ಭಟ್, ಕಂದಾಯ ನಿರೀಕ್ಷಕ ಧರ್ಮಸಾಮ್ರಾಜ್ಯ, ಮಂಜುನಾಥ್ ಕೆ.ಎಚ್.ಕುಮಾರ್ ಟಿ.ಸಿ. ಮತ್ತಿತರರು ಇದ್ದರು. 

Leave a Comment