ಬಂಟ್ವಾಳ: ವಿಟ್ಲ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನೇಕ ಧರ್ಮವಿರೋಧಿ, ಸಮಾಜವಿರೋಧಿ ಹಾಗೂ ಶಾಂತಿ ಕದಡುವ ಅನೇಕ ಕೆಲಸಗಳು ನಿರಂತರವಾಗಿ ನಡೆಯುತ್ತಿದ್ದರು ಕೂಡ ಅಂತವರ ಮೇಲೆ ಪ್ರಕರಣ ದಾಖಲು ಮಾಡಲು ಸಾಧ್ಯವಾಗದ ಪೋಲೀಸ್ ಇಲಾಖೆ, ಹಿಂದೂ ಧರ್ಮದ ರಕ್ಷಣೆಗಾಗಿ ಕಳೆದ 40 ವರ್ಷಗಳಿಂದ ಸಂಘಟನೆ ಸಮಾಜಮುಖಿ ಕೆಲಸ ಮಾಡುವ ಕಾರ್ಯಕರ್ತರ ಮೇಲೆ ಹಿಂದೂ ವಿರೋಧಿ ಸರಕಾರ ಹಾಗೂ ಪೋಲೀಸ್ ಇಲಾಖೆ ಪ್ರಕರಣ ದಾಖಲಿಸಿ ಮನೋ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಹಿಂದೂ ಜಾಗರಣಾ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಸಂಚಾಲಕ ನರಸಿಂಹ ಮಾಣಿ ಆರೋಪಿಸಿದರು.
ವಿಟ್ಲ ಪೋಲೀಸ್ ಠಾಣೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಅಕ್ಷಯ್ ರಜಪೂತ್ ಅವರಿಗೆ ನೀಡಿರುವ ನೋಟಿಸ್ ವಾಪಸು ಪಡೆಯಬೇಕು ಎಂದು ಹಿಂಜಾವೇ ಒತ್ತಾಯ ಮಾಡುತ್ತದೆ. ಹಿಂದೂ ಸಮಾಜಕ್ಕೆ ಕೆಲಸ ಮಾಡುವ ಕಾರ್ಯಕರ್ತರ ಮೇಲೆ ದಬ್ಬಾಳಿಕೆಯನ್ನು ಮಾಡುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.ರಜಪೂತ್ ಅವರ ಮೇಲೆ ಪೊಲೀಸ್ ಇಲಾಖೆ ನೀಡಿರುವ ನೋಟಿಸ್ ಗೆ ಕಾನೂನು ರೀತಿಯ ಹೋರಾಟದ ಮೂಲಕ ಉತ್ತರನೀಡಲು ಸಂಘಟನೆ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ವಿನಾಕಾರಣ ಪ್ರಕರಣ ದಾಖಲಿಸುವ ಕಾರ್ಯದಿಂದ ಪೋಲೀಸ್ ಇಲಾಖೆ ಹಿಂದೆ ನಡೆಯಬೇಕು, ಒಂದು ವೇಳೆ ಹಿಂದೆ ಸರಿಯದಿದ್ದರೆ ಮುಂದೆ ನಡೆಯುವ ಎಲ್ಲಾ ಅನಾಹುತಗಳಿಗೆ ಜಿಲ್ಲಾ ಆಡಳಿತ ಹಾಗೂ ಪೋಲೀಸ್ ಇಲಾಖೆಯೇ ಹೊಣೆಯಾಗಿ, ಅನುಭವಿಸಿಬೇಕಾಗುತ್ತದೆ ಎಂದು ಹೇಳಿದರು.
ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಮಾಣಿ –
ಕೊಡಾಜೆ ಸೇರಿದಂತೆ ಸಾಲೆತ್ತೂರು, ಮಂಗಿಲಪದವು ಪರಿಸರದಲ್ಲಿ ಗಾಂಜಾ ಸೇವನೆ ಸೇದುವುದಲ್ಲದೆ, ಹಿಂದೂ ಹುಡುಗಿಯರನ್ನು ಚುಡಾಯಿಸುವ ಕೆಲಸಗಳು ನಡೆಯುತ್ತಿದ್ದರೂ ಮೌನವಾಗಿರುವ ಇಲಾಖೆ , ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ಪ್ರಕರಣಗಳುನ್ನು ದಾಖಲಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಾಟ, ಗೋಸಾಗಟ, ಡ್ರಗ್ಸ್ ದಂದೆ, ಗಾಂಜಾ ಮಾರಾಟ, ಅಕ್ರಮ ಜೂಜಾಟ, ದರೋಡೆ,ಕಳ್ಳತನ ನಡೆದರೂ ಕಣ್ಣು ಮುಚ್ಚಿ ಕುಳಿತಿರುವ ಇಲಾಖೆಯ ನಡೆಯ ಮೇಲೆ ಸಂಶಯವಿದೆ ಎಂದು ಆರೋಪ ಮಾಡಿದ್ದಾರೆ.
ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಮುಗಿಬೀಳುವ ಪೋಲೀಸರ ತಾಕತ್ತು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ದೇಶದ್ರೋಹಿಗಳ ಮೇಲೆ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖರಾದ ರಾಜೇಶ್ ಬೊಳ್ಳುಕಲ್ಲು, ಸಮಿತ್ರಿರಾಜ್ ಧರೆಗುಡ್ಡೆ,ಪ್ರಶಾಂತ್ ಕೆಂಪುಗುಡ್ಡೆ,ತಿರುಲೇಶ್ ಬೆಳ್ಳೂರು ಉಪಸ್ಥಿತರಿದ್ದರು.















