ಸಾಲೆತ್ತೂರು: ಸಂಸ್ಕಾರ ಭಾರತೀ ಆಶ್ರಯದಲ್ಲಿ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ. ಪರಿಸರವನ್ನು ಪ್ರೀತಿಸುವುದೇ ಹಬ್ಬಗಳ ಸಂದೇಶ: ತಾರಾನಾಥ ಕೊಟ್ಟಾರಿ.

Coastal Bulletin
ಸಾಲೆತ್ತೂರು: ಸಂಸ್ಕಾರ ಭಾರತೀ ಆಶ್ರಯದಲ್ಲಿ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ. ಪರಿಸರವನ್ನು ಪ್ರೀತಿಸುವುದೇ ಹಬ್ಬಗಳ ಸಂದೇಶ: ತಾರಾನಾಥ ಕೊಟ್ಟಾರಿ.

ಬಂಟ್ವಾಳ :ಸಂಸ್ಕಾರ ಭಾರತೀ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ 'ಸಂಸ್ಕಾರ ಸೌರಭ'ಇದರ ವತಿಯಿಂದ ಬಂಟ್ವಾಳ ತಾಲೂಕಿನ ಸಾಲೆತ್ತೂರಿನ ಅಯ್ಯಪ್ಪ ಸೇವಾ ಟ್ರಸ್ಟ್ (ರಿ) ನ ಆವರಣದಲ್ಲಿ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ ನಡೆಯಿತು.

ದೀಪಾವಳಿ ಹಬ್ಬವು ಭಾರತೀಯರಿಗೆ ಕೃಷಿಯೊಂದಿಗೆ ಥಳಕು ಹಾಕಿಕೊಂಡಿರುವ ಹಬ್ಬ. ದೀಪಾವಳಿಯ ಮೂರು ದಿನಗಳೂ ವಿವಿಧ ಕಾರಣಗಳಿಗೆ ಮಹತ್ವದ ದಿನಗಳಾಗಿವೆ. ನಮ್ಮ ಧಾರ್ಮಿಕ ಹಬ್ಬಗಳೆಲ್ಲವೂ ಮನುಷ್ಯ ಪ್ರಕೃತಿಯ ಕೂಸು,ಆ ಕಾರಣದಿಂದಗಿ ಪ್ರಕೃತಿಯನ್ನು ಪ್ರೀತಿಸಬೇಕು ಮಾತ್ರವಲ್ಲ ಆರಾಧಿಸಬೇಕೆಂಬ ಸಂದೇಶವನ್ನೇ ಸಾರುತ್ತವೆ ಎಂದು ಸಂಸ್ಕಾರ ಬಾರತೀ ದ.ಕ.ಜಿಲ್ಲೆಯ ಅಧ್ಯಕ್ಷರಾದ‌ ತಾರಾನಾಥ ಕೊಟ್ಟಾರಿ ಹೇಳಿದರು. 


ಅವರು ಕಾರ್ಯಕ್ರಮ ವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ನಡೆಸಿದರು. ಬಳಿಕ ಹಸುವಿನ ಸೆಗಣಿಯಿಂದ ತಯಾರಿಸಲಾದ ಹಣತೆಗಳಲ್ಲಿ ಮಕ್ಕಳು ತುಪ್ಪದ ದೀಪ ಹಚ್ಚಿದರು. ಕು| ಹರ್ಷಿತಾ ರೈ ಕೊಲ್ಲಾಡಿ ಯವರು ಸಂಸ್ಕಾರ ಭಾರತೀ ಇದರ ಧ್ಯೇಯಗೀತೆ ಹಾಡಿದರು.

ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ರವರ ತ್ರಿಶತಾಬ್ಧಿ ಜನ್ಮದಿನಾಚರಣೆಯ ಅಂಗವಾಗಿ ಸಂಸ್ಕಾರ ಭಾರತೀ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿತ್ತು. ಮುನ್ನೂರು ವರ್ಷಗಳ ಹಿಂದೆ ಜನಿಸಿದ್ದ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ರವರು 28

ವರ್ಷ ರಾಜ್ಯವಾಳಿದ್ದರು.ಈ ಸಮಯದಲ್ಲಿ ನಾಶದ ಅಂಚಿನಲ್ಲಿದ್ದ ಮುನ್ನೂರಕ್ಕೂ ಹೆಚ್ಚು ದೇವಸ್ಥಾನಗಳ ಪುನರ್ ನಿರ್ಮಾಣ ಕಾರ್ಯವನ್ನು ನಡೆಸಿದ್ದೇ ಅಲ್ಲದೆ ಅನ್ನ ಛತ್ರ,ವಸತಿ, ಕುಡಿಯುವ ನೀರಿನ ವ್ಯವಸ್ಥೆ ಗಳಿ ಗಾಗಿ ದತ್ತಿ ದಾನ ಮಾಡಿ ದ್ದಷ್ಟೇ ಅಲ್ಲದೆ ಅಂಚೆ ಸೇವೆ,ಮಹಿಳಾ ಸೈನ್ಯ,ಸತಿ ಸಹಗಮನ ನಿಷೇಧ, ಕೇಶಮುಂಡನ ವಿರೋಧಿಸಿ ನಡೆಸಿದ ಸುಧಾರಣೆಗಳ ಬಗ್ಗೆ ವಿನುತಾ ಎ.ಶೆಟ್ಟಿ ,ಕೊಲ್ಲಾಡಿಯವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ವಿವರಿಸಿದರು.

ಮೈತ್ರೇಯಿ ಗುರುಕುಲದ ಮಾತಾಜಿ ಜಯಂತಿ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬಹುಮುಖ ಪ್ತತಿಭೆಯಾದ ಕು| ಹರ್ಷಿತಾ ಎಸ್ ರೈ ,ಕೊಲ್ಲಾಡಿಯವರನ್ನು ಸನ್ಮಾನಿಸಲಾಯಿತು.

ಬಳಿಕ ಮಕ್ಕಳ ಭಜನಾ ತಂಡದಿಂದ ಕುಣಿತ ಭಜನೆಯನ್ನು ನಡೆಸಲಾಯಿತು.ಮೂರ್ಕಜೆಯ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರಿಂದ ಅಹಲ್ಯಾಬಾಯಿ ಹೋಳ್ಕರ್ ಜೀವನಾಧಾರಿತ ನಾಟಕ ಪ್ರದರ್ಶನ ನಡೆಯಿತು.

ಸಂಧ್ಯಾ ಡಿ.ರೈ,ಕೊಲ್ಲಾಡಿ ಸ್ವಾಗತಿಸಿ ಕು| ಹರ್ಷಿತಾ ಮಾವೆ ವಂದಿಸಿದರು. ಮಹಿಮಾ ಡಿ ರೈ,ಅಗರಿ ಕಾರ್ಯಕ್ರಮ ನಿರೂಪಿಸಿದರು.

Leave a Comment