Coastal Bulletin

ಮಂಗಳೂರು :ಡಾ ತುಂಗಾಸ್ ಮನಸ್ವಿನಿ ಹಾಸ್ಪಿಟಲ್ ಅರ್ಕುಳ , ರೋಟರಿ ಕ್ಲಬ್ ಮಂಗಳೂರು ಸನ್ ರೈಸ್ , ರೋಟರಿ ಕ್ಲಬ್ ಬಂಟ್ವಾಳ ಟೌನ್ , ರೋಟರಿ ಕ್ಲಬ್ ಫರಂಗಿಪೇಟೆ ವತಿಯಿಂದ ಜಿಲ್ಲಾ ಯೋಜನೆ ಯಾದ ವನಸಿರಿ ಕಾರ್ಯಕ್ರಮ ದ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ರೋಟರಿ ಗವರ್ನರ್ ಪ್ರಕಾಶ್ ಕಾರಂತ್ ರವರು ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಮನಸ್ವಿನಿ ಆಸ್ಪತ್ರೆಯ ಲೋಗೊ ಬಿಡುಗಡೆ ಕಾರ್ಯಕ್ರಮವನ್ನು ಡಾ ಹಂಸರಾಜ್ ಆಳ್ವ ರವರು ನಡೆಸಿ ಕೊಟ್ಟರು. ಈ ಕಾರ್ಯಕ್ರಮ ಮನಸ್ವಿನಿ ಆಸ್ಪತ್ರೆ ಕಟ್ಟಡದಲ್ಲಿ ನಡೆಯಿತು.

ಪ್ರಮುಖರಾದ ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ ,ತುಂಗಾ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷರಾದ ಆನಂದರಾಮ ತುಂಗಾ , ಕರ್ನಾಟಕ ಬ್ಯಾಂಕ್ ನ ಮ್ಯಾನೇಜಿಂಗ್ ಡೈರೆಕ್ಟರ್ , ಸಿ ಇ ಓ ಮಹಾಬಲೇಶ್ವರ ಎಂ ಎಸ್ , ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ರೋಟರಿ ಕ್ಲಬ್ ಮಂಗಳೂರು ಸನ್ ರೈಸ್ ನ ಅಧ್ಯಕ್ಷರಾದ

ಚೆನ್ನಗಿರಿ ಗೌಡ , ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ , ರೋಟರಿ ಕ್ಲಬ್ ಫರಂಗಿಪೇಟೆ ಅಧ್ಯಕ್ಷರಾದ ಎ ಕೆ ಜಯರಾಮ ಶೇಕ , ಕಾರ್ಯದರ್ಶಿ ರಮೇಶ್ ಶೆಟ್ಟಿ ,ಡಾ ಸತೀಶ್ ರಾವ್ ಡಾ ತುಂಗಾಸ್ ಮನಸ್ವಿನಿ ಹಾಸ್ಪಿಟಲ್ ಅರ್ಕುಳದ ಡಾ ರವೀಶ್ ತುಂಗಾ , ಡಾ ಸುಚಿತ್ರ ತುಂಗಾ , ಪ್ರೇರಣಾ ತುಂಗಾ ,ಡಾ ತುಂಗಾಸ್ ಮನಸ್ವಿನಿ ಹಾಸ್ಪಿಟಲ್ ಅರ್ಕುಳ ಪ್ರಾಜೆಕ್ಟ್ ಕಮಿಟಿ ಯ ಉಮೇಶ್ ಶೆಟ್ಟಿ ಬರ್ಕೆ , ಅರ್ಜುನ್ ಪೂಂಜಾ , ವಿಶ್ವನಾಥ್ ತುಂಗಾ , ನಾಗರಾಜ್ ತುಂಗಾ ,ಹರಿರಾಜ್ ಮತ್ತಿತರರು ಉಪಸ್ಥಿತರಿದ್ದರು.

Leave a Comment