ಬಂಟ್ವಾಳ :ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು ಇದರ ಅಶ್ರಯದಲ್ಲಿ ನಾಯಿಲ ಗದ್ದೆಯಲ್ಲಿ ಕೆಸರ್ದ ಕಂಡೊಡು ಗೊಬ್ಬುದ ಕೂಟ ಕಾರ್ಯಕ್ರಮ 18ರಂದು ಆದಿತ್ಯವಾರ ಆಯೋಜಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ರಾಮ್ ಗಣೇಶ್ ಮಾಲಕರಾದ ಉಮೇಶ್ ನೆಲ್ಲಿಗುಡ್ಡೆ ಸಭಾಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಪ್ರವೀಣ್ ಸ್ವಾಮೀಜಿ ಮಾರುತಿನಗರ, ಲೋಕಸಭಾ ಸದಸ್ಯ ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಚಿವ ರಮನಾಥ ರೈ , ದಾಸ್ ಪ್ರಮೋಷನ್ ಆಡಳಿತ ನಿರ್ದೇಶಕರು ಲ|| ಅನಿಲ್ ದಾಸ್, ಜಿಲ್ಲಾ ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಮಾಜಿ ತಾ.ಪಂ ಸದಸ್ಯ ಸಂಜೀವ
ಪೂಜಾರಿ ಮತ್ತು ಪದ್ಮನಾಭ ರೈ , ಗುತ್ತಿಗೆದಾರರ ಅಧ್ಯಕ್ಷ ಶೈಲೇಶ್ ಪೂಜಾರಿ , ಗ್ರಾ.ಪಂ ಸದಸ್ಯ ಉಷಾ ರಮಾನಂದ, ನ್ಯಾಯವಾದಿ ಕಾವ್ಯಶ್ರೀ ಉಮೇಶ್, ಹರೀಶ್ ಮೊಗ೯ನಾಡು, ದಿನೇಶ್ ಕುಲಾಲ , ಸಂಚಾಲಕ ಶುಭಕರ ನಾಯಿಲ, ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು ಮತ್ತಿತರರು ವೇದಿಕೆಯಲ್ಲಿ ದ್ವೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಿನಿಮಾ ಕಲಾವಿದರು ಮತ್ತು ಕಂಬಳದ ಕೋಣ ಆಕರ್ಷಣೆಯಾಗಿತ್ತು.















