ಸಿದ್ದಕಟ್ಟೆ: ಆ.25ರಂದು ಸೂಕ್ತ ನ್ಯೂಸ್ 5ನೇ ವರ್ಷದ ಸಂಭ್ರಮಾಚರಣೆ. ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ.

Coastal Bulletin
ಸಿದ್ದಕಟ್ಟೆ: ಆ.25ರಂದು ಸೂಕ್ತ ನ್ಯೂಸ್ 5ನೇ ವರ್ಷದ ಸಂಭ್ರಮಾಚರಣೆ. ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ.

ಬಂಟ್ವಾಳ : ಸೂಕ್ತ ನ್ಯೂಸ್ ಡಿಜಿಟಲ್ ವಾಹಿನಿಯು ಆರಂಭವಾಗಿ ಯಶಸ್ವಿ 5ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇದರ 5ನೇ ಸಂಭ್ರಮಾಚರಣೆ ಕಾರ್ಯಕ್ರಮವು ಆ 25ರಂದು ಆದಿತ್ಯವಾರ ಸಿದ್ದಕಟ್ಟೆ ಫಲ್ಗುಣಿ ಕಾಂಪ್ಲೆಕ್ಸ್ ನಲ್ಲಿರುವ ನೇತ್ರಾವತಿ ಸಭಾಭವನದಲ್ಲಿ ನಡೆಯಲಿದೆ.

ಪೂಂಜ ಕ್ಷೇತ್ರದ ಅಸ್ರಣ್ಣರಾದ ಶ್ರೀ ಪಿ.ಕೃಷ್ಣಪ್ರಸಾದ್ ಆಚಾರ್ಯ ಹಾಗೂ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರಿನ ಶ್ರೀ ಶ್ರೀ ಮಹಾಭಲೇಶ್ವರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಪಿಲಾತಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಶ್ರೀ ಎಂ ತುಂಗಪ್ಪ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಶಿವಕುಮಾರ್ ಬಿ. ಪೊಲೀಸ್ ನಿರೀಕ್ಷಕರು ಬಂಟ್ವಾಳ ಗ್ರಾಮಾಂತರ ಠಾಣೆ, ಶ್ರೀ ನಂದಕುಮಾರ್ ಎಮ್. ಎಮ್, ಪೋಲಿಸ್ ಉಪನಿರೀಕ್ಷಕರು ಪುಂಜಾಲಕಟ್ಟೆ ಪೊಲೀಸ್ ಠಾಣೆ, ಶ್ರೀ ಜಾನ್ ವಿಲ್ಸನ್ ಲೋಬೊ, ನಿರ್ದೇಶಕರು ಲೋಬೋ ಫೌಂಡೇಷನ್ ಥಾಣೆ, ಮಹಾರಾಷ್ಟ್ರಶ್ರೀ ಸಂತೋಷ್ ನಾಯ್ಕ, ಉದ್ಯಮಿ ಮೈಸೂರು, ಶ್ರೀ ಕುಶಾಲ್ ಗೌಡ, ಪತ್ರಕರ್ತರು ಬೆಂಗಳೂರು,ಶ್ರೀ ಪ್ರಭಾಕರ ಪ್ರಭು, ಅಧ್ಯಕ್ಷರು ಸಿದ್ಧಕಟ್ಟೆ ಸೇವಾ ಸಹಕಾರಿ ಸಂಘ ನಿ.,ಶ್ರೀ ಪ್ರಶಾಂತ್ ಪುಂಜಾಲಕಟ್ಟೆ, ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ, ಶ್ರೀ ಸೀತರಾಮ ಆಚಾರ್ಯ, ಅಧ್ಯಕ್ಷರು ಪ್ರೆಸ್ ಕ್ಲಬ್, ಮೂಡಬಿದ್ರೆ, ಶ್ರೀ ಮೈಕಲ್ ಡಿಕೋಸ್ತಾ, ಸ್ಥಾಪಕಾಧ್ಯಕ್ಷರು ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ,ಶ್ರೀ ರಾಘವೇಂದ್ರ ಭಟ್ ಪ್ರಗತಿಪರ ಕೃಷಿಕರು, ಶ್ರೀ ಗುರುಕಮ್ಯೂನಿಕೇಷನ್, ಶ್ರೀ ಹಂಝ ಎ. ಬಸ್ತಿಕೋಡಿ, ಮಾಲಕರು ಅನಿಯಾ ದರ್ಬಾರ್ ಗ್ರೂಪ್ ಆಫ್ ಹೋಟೆಲ್, ಶ್ರೀ ಸುರೇಶ್ ಶೆಟ್ಟಿ, ವಕೀಲರು,

ಅಧ್ಯಕ್ಷರು ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್, ಶ್ರೀ ಸಂದೀಪ್ ಶೆಟ್ಟಿ ಪೊಡುಂಬ ಉದ್ಯಮಿ, ಅಧ್ಯಕ್ಷರು ವೀರ-ವಿಕ್ರಮ ಕೊಡಂಗೆ ಕಂಬಳ ಸಮಿತಿ, ಶ್ರೀ ಶಿವಯ್ಯ ಎಸ್.ಎಲ್, ಅಧ್ಯಕ್ಷರು ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ,ಶ್ರೀ ಕೆ. ಸತೀಶ್ ಕುಮಾರ್, ಮಾಲಕರು ಅಮರ್ ಗ್ರೂಪ್ ಬಿ.ಸಿ ರೋಡ್,ಶ್ರೀಮತಿ ಶೈಲಜಾ ರಾಜೇಶ್, ನ್ಯಾಯವಾದಿಗಳು,ಕರ್ನಾಟಕ ಸರಕಾರ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು, ಶ್ರೀಮತಿ ರಾಜೀವಿ ಪೂಜಾರಿ, ಅದ್ಯಕ್ಷರು ಗ್ರಾಮ ಪಂಚಾಯತ್ ಸಂಗಬೆಟ್ಟು,ಶ್ರೀ ರತ್ನಕುಮಾರ್ ಚೌಟ, ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಸಿದ್ಧಕಟ್ಟೆ,ಶ್ರೀ ದಿನೇಶ್ ಸುಂದರ ಶಾಂತಿ, ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣ ಗುರು ಸಂಘ ರಿ.ಸಿದ್ಧಕಟ್ಟೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಶ್ರೀ ನಾರಾಯಣ ನಾಯಕ್ ಕಿನ್ನಾಜೆ, ನಿವೃತ ಶಿಕ್ಷಕರು, ಡಾ। ಪ್ರಭಾಚಂದ್ರ ಜೈನ್, ಪದ್ಮ ಕ್ಲಿನಿಕ್ ಸಿದ್ಧಕಟ್ಟೆ, ಶ್ರೀ ರಾಜು ಪೂಜಾರಿ, ನಿವೃತ CRPF ASI, ಶ್ರೀ ಮೋಹನ್ ಜಿ.ಮೂಲ್ಯ, ನಿವೃತ ಯೋಧರು, ಶ್ರೀ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ, ಯಕ್ಷಗಾನ ಕಲಾವಿದರು ಸೂಕ್ತ ನ್ಯೂಸ್ ಗೌರವಾರ್ಪಣೆ ಸ್ವೀಕರಿಸಲಿದ್ದಾರೆ.

ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಜಯಕುಮಾರ್ ಜೈನ್ ಸಾರಥ್ಯದ ಆಮಂತ್ರಣ ಪರಿವಾರದಿಂದ ಆಮಂತ್ರಣ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ವಾಹಿನಿ ಮುಖ್ಯಸ್ಥರಾದ ಪ್ರದೀಪ್ ಪ್ರಕಟಣೆ ತಿಳಿಸಿದ್ದಾರೆ.

Leave a Comment