ಮಂಗಳೂರು :ಶ್ರೀರಾಮಸೇನ ಮಂಗಳೂರಿನ ಆಶ್ರಯದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಕುಳಾಯಿ ಹೊನ್ನ ಕಟ್ಟೆಯ ಶ್ರೀ ಚಾಮುಂಡೇಶ್ವರಿ ದೇವಳದ ರಂಗ ಮಂದಿರದಲ್ಲಿ ನಡೆಯಿತು.ವಿಶೇಷ ಅತಿಥಿಗಳಾಗಿ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಭಾಗವಹಿಸಿದ್ದರು.
ರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಪ್ರಾಸ್ತಾವಿಕ ನುಡಿಗಳನ್ನು ತಿಳಿಸಿ ಅತಿಥಿ- ಅಭಾಗ್ಯತರನ್ನು ಸ್ವಾಗತಿಸಿದರು. ಪ್ರಸನ್ನ ರವಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಸತ್ಯಜಿತ್ ಸುರತ್ಕಲ್ ಧ್ವಜಕ್ಕೆ ರಕ್ಷೆ ಕಟ್ಟಿ
ರಕ್ಷಾಬಂಧನದ ಮಹತ್ವದ ಬಗ್ಗೆ ಮಾತನಾಡಿದರು.
ಶ್ರೀ ರಾಮಸೇನ ಮಂಗಳೂರು ವಿಭಾಗ ಪ್ರಮುಖ ಮಧುಸೂದನ್ ಉರ್ವಾಸ್ಟೋರ್ ಹಾಗೂ ಸಂಘದ ಹಿರಿಯ ಪ್ರಮುಖ ಶೇಖರ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲಾ ವಕ್ತಾರ ಯೋಗೀಶ್ ಫರಂಗಿಫೇಟೆ ಕಾರ್ಯಕ್ರಮ ನಿರ್ವಹಿಸಿದರು















