Coastal Bulletin

ಬಂಟ್ವಾಳ: ಇಲ್ಲಿನ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಶ್ರೀರಾಮಾಂಜನೇಯ ವಿಶ್ವಸ್ಥ ಮಂಡಳಿ ವತಿಯಿಂದ 90ನೇ ವರ್ಷದ ಮೊಸರು ಕುಡಿಕೆ ಉತ್ಸವ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಕ ಶೋಭಾಯಾತ್ರೆ ಶುಕ್ರವಾರ ಸಂಜೆ ಸಂಭ್ರಮ ಸಡಗರದಿಂದ ನಡೆಯಿತು.

ಇದೇ ವೇಳೆ ಶೀಕೃಷ್ಣ ಭಾವಚಿತ್ರ ಸಹಿತ ಹೂವಿನಿಂದ ಅಲಂಕಾರಗೊಂಡ ಮಂಟಪ ಮೆರವಣಿಗೆ ಸಹಿತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದಿಂದ ಕನ್ನಡ ಭುವನೇಶ್ವರಿ ಮೆರವಣಿಗೆ, ಓಂ ಶಕ್ತಿ ಫ್ರೆಂಡ್ಸ್, ನೇತಾಜಿ ಯುವಕ ಮಂಡಲ ಇವರಿಂದ ಆಕರ್ಷಕ ಟ್ಯಾಬ್ಲೋ ಶೋಭಾಯಾತ್ರೆಗೆ ಮೆರುಗು ನೀಡಿತು.  

ಸಮಿತಿ ಅಧ್ಯಕ್ಷ ಡಾ. ಕೆ. ಪ್ರಭಾಕರ ಭಟ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಆರ್.ಚೆನ್ನಪ್ಪ ಕೋಟ್ಯಾನ್,

ಸುಲೋಚನಾ ಜಿ.ಕೆ. ಭಟ್, ಕಮಲಾಕ್ಷಿ ಪೂಜಾರಿ, ಕ.ಕೃಷ್ಣಪ್ಪ, ಡೊಂಬಯ ಟೈಲರ್, ನಾಗೇಶ್ ಕಲ್ಲಡ್ಕ, ಬಿ.ನಾರಾಯಣ ಸೋಮಯಾಜಿ, ವಸಂತ ಮಾಧವ, ಸುಜಿತ್ ಕೊಟ್ಟಾರಿ, ಯತಿನ್ ಕುಮಾರ್, ಪುಷ್ಪರಾಜ್ ಶೆಟ್ಟಿಗಾರ್, ಉತ್ತಮ್ ಕುಮಾರ್ ಪಳನೀರು, ಹರೀಶ್ ಆಚಾರ್ಯ, ದಿನೇಶ್ ಅಮ್ಟೂರು, ಬೊಂಡಾಲ ಜನಾರ್ದನ ಕುಲಾಲ್, ಚಿತ್ತರಂಜನ್ ಹೊಸಕಟ್ಟ, ಮೋನಪ್ಪ ದೇವಸ್ಯ, ವಜ್ರನಾಥ ಕಲ್ಲಡ್ಕ ಮತ್ತಿತರರು ಇದ್ದರು. ಬಂಟ್ವಾಳ ಗ್ರಾಮಾಂತರ, ನಗರ ಮತ್ತು ಸಂಚಾರಿ ಠಾಣೆ ಪೊಲೀಸರು ಸಂಚಾರ ಸುಗಮಗೊಳಿಸಿದರು.

Leave a Comment