Coastal Bulletin

ಬಂಟ್ವಾಳ:ಇಲ್ಲಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ರೂ 3.5 ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಳ್ಳುತ್ತಿದ್ದು, ಶಿಲಾಮಯ ಗರ್ಭಗುಡಿ ನಿರ್ಮಾಣಕ್ಕೆ ಕಾರ್ಕಳ ದಿಂದ ಶನಿವಾರ ಆಗಮಿಸಿದ ಶಿಲೆಗೆ ಶನಿವಾರ ಶಿಲಾ ಪೂಜೆ ನಡೆಯಿತು. ಆರಂಭದಲ್ಲಿ ಸಿದ್ಧಕಟ್ಟೆ- ರಾಯಿ ಮುಖ್ಯರಸ್ತೆ ಮೂಲಕ ನಡೆದ ಆಕರ್ಷಕ ಮೆರವಣಿಗೆಯಲ್ಲಿ ಚೆಂಡೆ, ಕೊಂಬು, ಬ್ಯಾಂಡು, ಚಿಲಿಪಿಲಿ ಗೊಂಬೆ ಕುಣಿತ ಮತ್ತು ವಿವಿಧ ಭಜನಾ ತಂಡಗಳು ಗಮನ ಸೆಳೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತಾವು, ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ರಾಜೇಶ ಶೆಟ್ಟಿ ಸೀತಾಳ, ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಭಜನಾ ಮಂಡಳಿ ಅಧ್ಯಕ್ಷ ರಾಜೇಶ ಶಿವನಗರ, ಅರ್ಚಕ

ರಾಮಚಂದ್ರ ಭಟ್, ದಿನೇಶ ಭಟ್, ಹರೀಶ ಭಟ್, ಪ್ರಮುಖರಾದ ಸದಾನಂದ ಶೆಟ್ಟಿ ಮುಡ್ರಾಯಿ, ರಾಜೇಶ ಜೈನ್ ಪಡ್ರಾಯಿ, ಜಿ.ಸುಂದರ ಭಂಡಾರಿ, ವಸಂತ ಗೌಡ ಮುದ್ದಾಜೆ, ಮಧುಕರ ಬಂಗೇರ, ಕೆ.ಪರಮೇಶ್ವರ ಪೂಜಾರಿ, ಸಂತೋಷ್ ಕುಮಾರ್ ಬೆಟ್ಟು, ಸೋಮಪ್ಪ ಮಡಿವಾಳ ಮತ್ತಿತರರು ಇದ್ದರು. 

Leave a Comment