ಬಂಟ್ವಾಳ: ಆದಿದ್ರಾವಿಡ ನೌಕರರ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಸಂಭ್ರಮೋತ್ಸವ ಮತ್ತು ಕ್ರೀಡಾಕೂಟವು ಬಂಟ್ವಾಳದ ಎಸ್‌ವಿಎಸ್ ಪ್ರೌಢಶಾಲೆಯ ಮೈದಾನದಲ್ಲಿ ಭಾನುವಾರ ನಡೆಯಿತು.
ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯ ಗೌರವ ಸಲಹೆಗಾರರಾದ ಬೊಮ್ಮಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ವಿಶುಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಲೇರಿ ಶ್ರೀ ಸತ್ಯಸಾರಮಾನಿ ಕಾನದ ಕಟದ ಮೂಲ ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಜ್ ಪಿ.ಬಿ. ಜಿ.ಪಂ. ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ದನ ಚೆಂಡ್ತಿಮಾರ್, ಪ್ರಮುಖರಾದ ಶಿವಾನಂದ ಬಲ್ಲಾಳ್‌ಭಾಗ್, ಭಾಗೀರಥೀ ಮುರುಳ್ಯ, ರವೀಂದ್ರ ಚೆಂಡ್ತಿಮಾರ್, ಅಣ್ಣು ಖಂಡಿಗ, ರಾಜ ಚೆಂಡ್ತಿಮಾರ್, ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲಿಯಾನ್, ಅನಿಲ್ ಕಂಕನಾಡಿ, ಕೆ. ಸತೀಶ್ ಅರಳ, ಕೆ. ಪೂವಪ್ಪ ಪುತ್ತೂರು, ಲಿಂಗಪ್ಪ ಕೈಲಾರ್, ಶಿವಕುಮಾರ್ ಮೈರಾನ್‌ಪಾದೆ, ಭವಾಣಿ ಲಿಂಗಪ್ಪ, ಶ್ರೀನಿವಾಸ ಪುಚ್ಚೆಮೊಗರು, ಲೋಕಯ್ಯ ಗಾಡಿಪಲ್ಕೆ, ಅವಿನಾಶ್
ಎನ್., ಚಂದಪ್ಪ, ಸುನೀಲ್ ಬಲ್ಲಾಳ್‌ಬಾಗ್, ಪ್ರಶಾಂತ್ ಕಂಕನಾಡಿ, ಗಣೇಶ್ ಪ್ರಸಾದ್, ತಿಮ್ಮಪ್ಪ ಬಿ., ಅವಿನಾಶ್ ಬಿ., ಮಂಜುನಾಥ, ಸಂಜೀವ, ಪ್ರಕಾಶ್ ಮೆಲ್ಕಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ರಾಜೀವ್ ಮಲ್ಲಿಂಜೆ ಮೂಡಬಿದ್ರೆ, ಕೊಳಕೆ ಇರ್ವತ್ತೂರು ಆನಂದ, ದಿವಾಕರ ಚೆಂಡ್ತಿಮಾರ್, ಚಂದ್ರಶೇಖರ ಕಕ್ಯಪದವು, ಮನೋಜ್ ವೇಣೂರು ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯೂಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾಣಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಮಹಾನಾಯಕ ಟ್ರೋಪಿ ನೀಡಿ ಗೌರವಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಹರೀಶ್ ಕುಮಾರ್, ಸುಶೀಲಾ ಶಿವಕುಮಾರ್, ಯೋಗೀಶ್ ಚೆಂಡ್ತಿಮಾರ್, ಚಂದ್ರಹಾಸ ಅರ್ಬಿಗುಡ್ಡೆ, ಪೂರ್ಣಿಮಾ ಬಂಟ್ವಾಳ, ರಾಮ ಚೆಂಡ್ತಿಮಾರ್, ರಮಣಿ ಚೆಂಡ್ತಿಮಾರ್, ಕೃಷ್ಣಮೂರ್ತಿ, ಅನಿತಾ ರವೀಂದ್ರ, ವೆಂಕಟೇಶ್ ಕೃಷ್ಣಾಪುರ, ಶ್ರೀನಿವಾಸ ಅರ್ಬಿಗುಡ್ಡೆ ಮೊದಲಾದವರು ಸಹಕರಿಸಿದರು.














