ಬಂಟ್ವಾಳ: ಮರಕಡ ಬೈಲುಗುತ್ತು ಗರಡಿಮನೆ ಧರ್ಮಚಾವಡಿ ಅಮೀನ್ ಕುಟುಂಬಸ್ಥರ ದೈವದೇವರ ಆರಾಧನ ಸಮಿತಿ ಇದರ ನವೀಕೃತ ಶ್ರೀ ನಾಗಸಾನ್ನಿಧ್ಯ ಗರಡಿಮನೆ ಧರ್ಮಚಾವಡಿ ಜಲದುರ್ಗೆ ಭದ್ರಕಾಳಿ ಗುಡಿ ಪಂಚದೈವ ಭೈರವ ಶಕ್ತಿ ಕಲ್ಲುರ್ಟಿ -ಪಂಜುರ್ಲಿ ಹಾಗೂ ಪರಿವಾರ ದೈವಗಳ ಸಾನ್ನಿಧ್ಯ ನಿರ್ಮಾಣಕ್ಕೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಶಿಲಾನ್ಯಾಸ ನಡೆಯಿತು. ಲೋಕೇಶ್ ಶಾಂತಿಯವರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನೆರವೇರಿತು.
ಕೇಂದ್ರದ ಮಾಜಿ ಸಚಿವರು,ಹಿರಿಯರಾದ ಜನಾರ್ಧನ ಪೂಜಾರಿ ದಂಪತಿಯವರು ಶಿಲಾನ್ಯಾಸಗೈದು ಮಾತನಾಡಿ, ತನ್ನ ತಂದೆಯವರ ಈ ಕುಟುಂಬದ ಮನೆಯ ನೂತನ ಸಾನ್ನಿಧ್ಯ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದ್ದು,ನೂತನ ಸಾನ್ನಿಧ್ಯ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್,ಆರಾಧನಾ ಸಮಿತಿ ಅಧ್ಯಕ್ಷ ಮರಕಡ ಬೈಲುಗುತ್ತು ರಾಘವ ಅಮೀನ್, ಜನಾರ್ದನ ಪೂಜಾರಿ ಅವರ ಪತ್ನಿ ಮಾಲತಿ ಜನಾರ್ದನ ಪೂಜಾರಿ ಅವರಪತ್ರ ಸಂತೋಷ್ , ಕುಟುಂಬಸ್ಥರು ಸ್ಥಳೀಯ ಗಣ್ಯರು ಪಾಲ್ಗೊಂಡಿದ್ದರು.
ಸಂಘದ
ಉಪಾಧ್ಯಕ್ಷರಾದ ರಾಜ್ ಕುಮಾರ್ ಅಮೀನ್ ಮರೋಳಿ, ಗಣೇಶ್ ಅಮೀನ್ ಹಳೆಯಂಗಡಿ ,ಗಡಿ ಪ್ರಧಾನರಾದ ರಾಜೇಶ್ ಪೂಜಾರಿ, ಸಲಹೆಗಾರರಾದ ಸೋಮಪ್ಪ ಅಮೀನ್ ಹೊಸಮಾರು, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಭುವನೇಶ್ ಪಚ್ಚಿನಡ್ಕ ,ಜತೆ ಕಾರ್ಯದರ್ಶಿ ರಮೇಶ್ ಅಮೀನ್ ಮರಕಡಬೈಲು, ಜೊತೆ ಕೋಶಾಧಿಕಾರಿ ಗಣೇಶ್ ಅಮೀನ್ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಶ್ರೀಧರ್ ಅಮೀನ್ ವರದಿ ವಾಚಿಸಿದರು .ಕೋಶಾಧಿಕಾರಿ ಸುರೇಂದ್ರ ಅಮೀನ್ ಮರಕಡಬೈಲು ಲೆಕ್ಕಪತ್ರ ಮಂಡಿಸಿದರು .ಉಪಾಧ್ಯಕ್ಷ ದಿನೇಶ್ ಅಮೀನ್ ಬಂಟ್ವಾಳ್ ಪ್ರಾಸ್ತವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಸಂದೀಪ್ ಅಮೀನ್ ಸ್ವಾಗತಿಸಿ, ವಂದಿಸಿದರು. ಲೆಕ್ಕಪರಿಶೋಧಕರಾದ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.














