Coastal Bulletin

ಮೂಡುಬಿದಿರೆ: ತಲೆಗೆ ಗಂಭೀರ ಗಾಯಗಳೊಂದಿಗೆ ಆಕ್ಸಿಜನ್ ಪೈಪ್ ನೆರವಿನಲ್ಲಿ ಕೋಮಾದಲ್ಲಿದ್ದ ಕಾರ್ಮಿಕ , ಯಾವೊಬ್ಬ ವೈದ್ಯಕೀಯ ಸಿಬ್ಬಂದಿಯೂ ಜತೆಗಿಲ್ಲ, ಟಿಕೇಟು ಕಾಯ್ದಿರಿಸಿ ವಿಮಾನ ನಿಲ್ದಾಣಕ್ಕೆ ಸಕಾಲದಲ್ಲಿ ತಲುಪಿದರೂ ರೋಗಿಯನ್ನು ಈ ಸ್ಥಿತಿಯಲ್ಲಿ ಕರೆದೊಯ್ಯಲು ನಿರಾಕರಿಸಿದ ವಿಮಾನ ಸಿಬಂದಿ, ಹೇಗಾದರೂ ಸರಿ ಬರೋಬ್ಬರಿ 2700 ಕಿ.ಮೀ ದೂರದ ಉತ್ತರ ಪ್ರದೇಶ ಮೊರಾದಾಬಾದ್ ಮೂಲದ ಈ ಕಾರ್ಮಿಕನ ಹುಟ್ಟೂರಿಗೆ ಆದಷ್ಟು ಬೇಗ ನಮ್ಮನ್ನು ತಲುಪಿಸಿ ಎಂದು ಪಟ್ಟು ಹಿಡಿದ ರೋಗಿಯ ತಂದೆ.. ಆಂಬುಲೆನ್ಸ್ ಮಾತ್ರ ಅವರ ಮುಂದಿದ್ದ ಸವಾಲು. ಆದರೆ ಇಂತಹದ್ದೊಂದು ಕಠಿಣ ಸವಾಲಿಗೆ ಮಾನವೀಯ ನೆಲೆಯಲ್ಲಿ ಸೈ ಎಂದು ಹೊರಟು ನಿಂತವರು ಐರಾವತ ಅಂಬುಲೆನ್ಸ್ನ ಮಾಲಕ ಅನಿಲ್ ರೂಬನ್ ಮೆಂಡೋನ್ಸಾ.

ಗಮನಾರ್ಹ ಸಂಗತಿ ಎಂದರೆ ಹೀಗೊಂದು ಸವಾಲಿನೊಂದಿಗೆ ಹೊರಡುವವರೇ ಇಲ್ಲ. ಪೋಲೀಸ್ ಠಾಣೆ, ವೈದ್ಯರೂ 'ನಿಮ್ಮ ರಿಸ್ಕ್ ' ಎಂದಾಗ ಜೀರೋ ಟ್ರಾಫಿಕ್, ವೈದ್ಯಕೀಯ ಸಿಬಂದಿಯೂ ಜತೆಗಿರದೇ ಗೊತ್ತಿರದ ದೂರದ ಊರಿಗೆ ದೇವರ ಮೇಲೆ ಭಾರ ಹಾಕಿ ಸರ್ರನೇ ಉಟ್ಟ ಬಟ್ಟೆಯಲ್ಲೇ ಚಾಲಕ ಅಶ್ವತ್ಥ್ ಜತೆ ಹಿಂದು ಮುಂದು ಯೋಚಿಸದೇ ಹೊರಟವರು ಅನಿಲ್. ಕೋಮಾದಲ್ಲಿದ್ದ 29ರ ಹರೆಯದ ಕಾಮರ್ಿಕ ಮಹಾಂದಿ ಹಸನ್, ಅವರ ತಂದೆ ಬಬ್ಬು, ಹಸನ್ ಸ್ನೇಹಿತ ವಾಸೀಂ ಮಾರುತಿ ಸುಜುಕಿ ಇಕೋ ಐರಾವತ ಆಂಬುಲೆನ್ಸ್ನಲ್ಲಿದ್ದವರು.

ಯಾಕೆ ಹೀಗಾಯ್ತು?

ಉತ್ತರ ಪ್ರದೇಶ ಬಹಾದೂರ್ಗಂಜ್ ರಾಂಪುರ

ಜಿಲ್ಲೆಯ ಮೊರಾದಾಬಾದ್ ಮೂಲದ ಮಹಾಂದಿ ಹಸನ್ ಮೂಡುಬಿದಿರೆಯ ಮಾಸ್ತಿಕಟ್ಟೆಯ ಅಡಿಕೆ ದಾಸ್ತಾನು ಗೋದಾಮಿನಲ್ಲಿ ಕೆಲಸದ ವೇಳೆ ಮಾಡಿನಿಂದ ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರ ಗಾಯಗಳೊಂದಿಗೆ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿ ಆ25 ರಿಂದ ಸೆ 9ರ ವರೆಗೂ ಚಿಕಿತ್ಸೆ ಪಡೆದಿದ್ದರು. ದೂರದ ಉತ್ತರ ಪ್ರದೇಶದಲ್ಲಿದ್ದ ಮನೆ ಮಂದಿಗೆ ಈತನನ್ನು ಕಾಣುವ ಆತಂಕ. ಕೋಮಾದಲ್ಲಿ ಬೇರೆ ಇದ್ದುದರಿಂದ ಆತನನ್ನು ಕಾಣಬೇಕು. ಮನೆ ಮಂದಿಯ ಧ್ವನಿಗಾದರೂ ಆತ ಚೇತರಿಸಿಕೊಂಡಾನು ಎಂಬ ಅಭಿಪ್ರಾಯದೊಂದಿಗೆ ಹೇಗಾದರೂ ಆತನನ್ನು ಊರಿಗೆ ಕರೆದೊಯ್ಯಲು ಸ್ನೇಹಿತ ಮತ್ತು ತಂದೆ ವಿಮಾನ ಟಿಕೆಟ್ ಬುಕ್ ಮಾಡಿದ್ದಾಯಿತು

Leave a Comment