Coastal Bulletin

ಬಂಟ್ವಾಳ :ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಟಿ ರಥ ಸಮರ್ಪಣಾ ಸಮಿತಿಯ ಮಹಾಸಭೆ ತಾ. ಸೆ.18ರಂದು ಆದಿತ್ಯವಾರ ಬೆಳಿಗ್ಗೆ ಪೊಳಲಿಯ ಸರ್ವ ಮಂಗಳಾ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ರಾಮದಾಸ್ ಬಂಟ್ವಾಳರವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಇತ್ತೀಚೆಗೆ ಸ್ವರ್ಗಸ್ಥರಾದ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ್ ಕದ್ರಿಯವರಿಗೆ ನುಡಿನಮನ ಸಲ್ಲಿಸಲಾಯಿತು. ನಂತರ ನಡೆದ ಮಹಾಸಭೆಯಲ್ಲಿ ಷಷ್ಠಿ ರಥ ಸಮರ್ಪಣೆಯ ಅಂತಿಮ ಲೆಕ್ಕ ಪತ್ರವನ್ನು ಕೋಶಾಧಿಕಾರಿ ನಾಗೇಶ ದೇವಾಡಿಗರವರು ಮಂಡಿಸಿದರು.

ಕೆಲವೊಂದು ಸಲಹೆಗಳ ಬಳಿಕ ಲೆಕ್ಕಪತ್ರವನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು. ಷಷ್ಟಿ ರಥ ಸಮರ್ಪಣೆಯಾಗಿ ಮಿಗತೆಯಾಗಿ ಬ್ಯಾಂಕ್ ಆಫ್ ಬರೋಡ ಪೊಳಲಿ ಶಾಖೆಯಲ್ಲಿ ಉಳಿತಾಯ ಖಾತೆಯಲ್ಲಿ ಜಮೆಯಾಗಿರುವ ಮೊತ್ತ ರೂ.23,76,124.60 ರಲ್ಲಿ ರೂ. 20,00,000.00 (ರೂ. ಇಪ್ಪತ್ತು

ಲಕ್ಷ )ವನ್ನು ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಟಿ ರಥ ಸಮಿತಿಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ (NON WITHDRAWABLE FIXED DEPOSIT)ನಿರಖು ಠೇವಣಿಯಾಗಿಡುವುದಾಗಿ ನಿರ್ಣಯಿಸಲಾಯಿತು. ಇದನ್ನು ಪೊಳಲಿಯ ನಾಗೇಶ ದೇವಾಡಿಗ (ರಥ ಸಮರ್ಪಣಾ ಸಮಿತಿಯ ಹಿಂದಿನ ಕೋಶಾಧಿಕಾರಿ), ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷರು ಹಾಗೂ .ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರು ಈ 3 ಜನರು ಜಂಟಿಯಾಗಿ ನಿರ್ವಹಿಸುವುದೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.

Leave a Comment