Coastal Bulletin

ಬಂಟ್ವಾಳ :ವಿಶ್ವನಾಯಕ ಭಾರತ ಕಂಡ ಸರ್ವಶ್ರೇಷ್ಠ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ಜನ್ಮದಿನಾಚರಣೆಯ ಅಂಗವಾಗಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ರಮಾನಾಥ ರಾಯಿ, ರಾಯಿ ಗ್ರಾ ಪಂ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ವೈದ್ಯಾಧಿಕಾರಿ ಡಾ. ಮನೋನ್ಮಣಿ, ಭಜನಾ ಮಂಡಳಿ ಅಧ್ಯಕ್ಷ ಸಂದೇಶ್ ಅಂತರ, ಮಹಿಳಾ

ಸಮಿತಿ ಅದ್ಯಕ್ಷೆ ಸುಜಾತ, ಗ್ರಾ ಪಂ ಸದಸ್ಯರಾದ, ರವೀಂದ್ರ ಪೂಜಾರಿ ಬದನಡಿ, ಸಂತೋಷ್ ಕುಮಾರ್ ಬೆಟ್ಟು ರಾಯಿ, ಕಾರ್ಯದರ್ಶಿ ಸುಕೇಶ್ ಸಿಂಗಲಚ್ಚಿಲ್ ಹಾಗೂ ಆರೋಗ್ಯ ಕೇಂದ್ರ ಸಿಬ್ಬಂದಿಗಳು, ಭಜನಾ ಮಂಡಳಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Leave a Comment