Coastal Bulletin

ಬಂಟ್ವಾಳ: ಯುವಕಾಂಗ್ರೇಸ್ ಪಾಣೆಮಂಗಳೂರು ಬ್ಲಾಕ್ ವತಿಯಿಂದ ಯವಕರ ನಡೆ ಸಾಮರಸ್ಯದ ಕಡೆ ಗ್ರಾಮ ಚಲೋದ ಸಮಾರೋಪವು ಮಾ.19 ರಂದು 3 ಗಂಟೆಗೆ ಬಿ.ಸಿ.ರೋಡಿನ ಪೂಂಜಾ ಮೈದಾನದಲ್ಲಿ ಸಂಪನ್ನಗೊಳ್ಳಲಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿರುವ  ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಇದಕ್ಕು ಮೊದಲು ಬಿ.ಸಿ.ರೋಡು ಬ್ರಹ್ಮಶ್ರೀ ಗುರುನಾರಾಯಣ ವೃತ್ತದಿಂದ ಕೈಕಂಬದ ಪೂಂಜ ಮೈದಾನದವರೆಗೆ ಪಾದಾಯಾತ್ರೆ ನಡೆಯಲಿದೆ ಎಂದರು.

ಗಾಂಧೀಜಿಯವರ ಅಹಿಂಸಾ ತತ್ವದಡಿಯಲ್ಲಿ ಕಾಂಗ್ರೇಸ್ ಪಕ್ಷ ಅಹಿಂಸಾತ್ಮಕ ಚಳುವಳಿಯ ಮೂಲಕ ಸಮಾಜದಲ್ಲಿ ಶಾಂತಿಗಾಗಿ ಈ ಕಾರ್ಯಕ್ರಮ ಆಯೋಜಿಸಿದೆ ಇದರ ಭಾಗವಾಗಿ ಈ ಪಾದಯಾತ್ರೆ, ಸಮಾವೇಶ ನಡಯಲಿದೆ ಸಮಾಜದಲ್ಲಿ ಶಾಂತಿ ಬಯಸುವ ಎಲ್ಲಾ ವರ್ಗ, ಧರ್ಮದ ಜನರು ಈ ನಡಿಗೆಯಲ್ಲಿ ಪಾಲ್ಗೊಳ್ಳಬಹುದು ಎಂದರು. 

ಕೊರೊನಾ ಸಂದರ್ಭದಲ್ಲಿ  ಕಿಟ್ ವಿತರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ, ಮಾಜಿ ಪ್ರದಾನಿ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಕ್ಷೇಮ ನಿಧಿಯನ್ನು ಸ್ಥಾಪಿಸಿ ಹಲವಾರು ಮಂದಿಗೆ  ನೆರವಾಗಿದ್ದೇವೆ. ಕೆಲಪಕ್ಷಗಳು  ಭಾವನಾತ್ಮಕವಾಗಿ, ಅಪಪ್ರಚಾರದ ಮೂಲಕ ಜನರ ದಾರಿ ತಪ್ಪಿಸುವ ಕೆಲಸ  ಮಾಡುತ್ತಿದೆ ಎಂದ ಅವರು  ಸಮಾಜದ ಹಿತವನ್ನು ಕಾಯುವ ಕಾಂಗ್ರೇಸ್ ಪಕ್ಷ ಮತ್ತೆ

ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫೀನಿಕ್ಸ್ ನಂತೆ ಮತ್ತೆ ಎದ್ದು ಬರಲಿದೆ. ಸೋಲು -ಗೆಲುವು ರಾಜಕೀಯ ಪಕ್ಷಕ್ಕೆ ಹೊಸತು ಅಲ್ಲ, ಪಂಚರಾಜ್ಯಗಳ ಚುನಾವಣೆಯಲ್ಲಿ  ತಾತ್ಕಾಲಿಕ ಹಿನ್ನಡೆ ಆಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷ ಫೀನಿಕ್ಸ್ ನಂತೆ ಮತ್ತೆ ಎದ್ದು ಬಂದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ಈ ದೇಶಕ್ಕೆ ಕಾಂಗ್ರೇಸ್ ಪಕ್ಷ  ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದರು.

ಇಡೀ ರಾಜ್ಯದ ಗಮನಸೆಳೆದು ಒಂದು ದಶಕಗಳ ಕಾಲ ನಡೆದ ಬಳಿಕ ಸ್ಥಗಿತಗೊಂಡಿರುವ ಮೂಡೂರು- ಪಡೂರು ಜೋಡುಕರೆ ಬಯಲು ಕಂಬಳವನ್ನು ಮತ್ತೆ ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. 

ಮಾಜಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಬೇಬಿಕುಂದರ್, ಪ್ರಮುಖರಾದ ಅಬ್ಬಾಸ್ ಆಲಿ, ಪದ್ಮನಾಭ ರೈ, ಸುರೇಶ್ ಜೊರಾ, ನವಾಜ್ ಬಡಕಬೈಲು, ನಾರಾಯಣ ನಾಯ್ಕ್,ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Leave a Comment