ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡಿನ ಅಜ್ಜಿಬೆಟ್ಟು ಪರಿಸರದಲ್ಲಿರುವ ಬಿ.ಮೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೌರವ ಶಿಕ್ಷಕಿಯರ ವೇತನಕ್ಕೆ ವಿನಿಯೋಗಿಸಲು ರೂ 70 ಸಾವಿರ ನೆರವು ನೀಡಲಾಯಿತು.
ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಹಮ್ಮದ್ ವಳವೂರು ಮತ್ತು ಕಾರ್ಯದರ್ಶಿ ಧನಂಜಯ ಬಾಳಿಗಾ ಬುಧವಾರ ಶಾಲೆಗೆ ಆಗಮಿಸಿ ನೆರವು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ
ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ, ಮುಖ್ಯ ಶಿಕ್ಷಕಿ ಕುಶಲಾ, ಶಿಕ್ಷಕರಾದ ನವೀನ್ ಪಿ.ಎಸ್, ಸುಶೀಲಾ, ಹೇಮಾವತಿ, ತಾಹಿರಾ ಹಾಗೂ ಗೌರವ ಶಿಕ್ಷಕಿಯರು ಉಪಸ್ಥಿತರಿದ್ದರು.














