ಬಂಟ್ವಾಳ :ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ( ರಿ )ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಬಂಟ್ವಾಳ ತಾಲೂಕಿನ ಕುಂಟಾಲಪಲ್ಕೆ ಸರಕಾರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕರಾದ ಸುಧಾಮ ಇವರನ್ನು ಬಂಟ್ವಾಳ ತಾಲೂಕು ಶಿಕ್ಷಕರ ಸಂಘದ ಪರವಾಗಿ ತಾಲೂಕು ಕಛೇರಿಯಲ್ಲಿ ಶುಕ್ರವಾರ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನವೀನ್ ಪಿ ಎಸ್, ತಾಲೂಕು ಅಧ್ಯಕ್ಷ ಜಯರಾಮ್,
ಜಿಲ್ಲಾ ಸಹಕಾರ್ಯದರ್ಶಿ ಪ್ರಮೀಳ, ತಾಲೂಕು ಕಾರ್ಯದರ್ಶಿ ಯತೀಶ್, ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್ ತುಂಬೆ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.














