ತುಂಬೆ :ಸಂಗಮ್ ಅಕಾಡೆಮಿಯ ವಿದ್ಯಾರ್ಥಿಗಳಿಗೆ ರಾಷ್ಟ್ರ,ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪದಕ.

Coastal Bulletin
ತುಂಬೆ :ಸಂಗಮ್ ಅಕಾಡೆಮಿಯ ವಿದ್ಯಾರ್ಥಿಗಳಿಗೆ ರಾಷ್ಟ್ರ,ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪದಕ.

ಬಂಟ್ವಾಳ :ಸಂಗಮ್ ಅಕಾಡೆಮಿ ತುಂಬೆ ಇಲ್ಲಿಯ ವಿದ್ಯಾರ್ಥಿಗಳು ರಾಷ್ಟ್ರ, ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪದಕ ವಿಜೇತರಾಗಿದ್ದಾರೆ.

ಡೋಜೋ 21ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ 2024 ಆಗಸ್ಟ್ 17 ರಂದು ಮೂಡುಬಿದಿರೆಯಲ್ಲಿ ನಡೆದ ಸ್ಪರ್ಧೆಯ ಕುಮಿಟೆಯಲ್ಲಿ ಮೊಹಮ್ಮದ್ ಇಮಾದ್ ಚಿನ್ನದ ಪದಕ, ಫಾತಿಮಾ ಇಫಾ ಬೆಳ್ಳಿ ಪದಕ ಹಾಗೂ ಫಾತಿಮಾ ಇಷ್ಮಾ ಕಟಾದಲ್ಲಿ ಕಂಚಿನ ಪದಕ ವಿಜೇತರಾದರು.

ರಾಷ್ಟ್ರೀಯ ಮಟ್ಟದ ಕರಾಟೆ

ಚಾಂಪಿಯನ್‌ಶಿಪ್ 2024 ಆಗಸ್ಟ್ 18ರಂದು ಉಡುಪಿಯಲ್ಲಿ ನಡೆದ ಸ್ಪರ್ಧೆಯ ಕುಮಿಟೆಯಲ್ಲಿ ಅನನ್ಯಾ ಅನಿಲ್ ಬೆಳ್ಳಿ ಪದಕ ಪಡೆದರು, ಅನನ್ಯ ಪುಷ್ಪರಾಜ್ ಕಂಚಿನ ಪದಕ, ಇಶಾನಿ ಕಂಚಿನ ಪದಕ, ರಿಶಾಲ್ ಶೆಟ್ಟಿ ಕಂಚಿನ ಪದಕ, ಪ್ರಥಮ್ ಕಂಚಿನ ಪದಕ ವಿಜೇತರಾಗಿದ್ದಾರೆ ಎಂದು ಸಂಗಮ್ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment