Coastal Bulletin

ಬರವಣಿಗೆಯ ಮೂಲಕ ಸಾಹಿತಿಗಳು ಸಮಾಜದಲ್ಲಿ ದೇಶಾಭೀಮಾನವನ್ನು ಬೆಳೆಸುವ ಕಾರ್ಯ ಮಾಡಬೇಕು. ಸಾಹಿತ್ಯ ಜ್ಞಾನವನ್ನು ಹೆಚ್ಚಿಸುತ್ತದೆ. ಸಾಹಿತಿಗಳು ಸಾತ್ವಿಕರಾಗಿದ್ದು ಸಾತ್ವಿಕ ಸಮಾಜ ನಿರ್ಮಾಣವಾಗಬೇಕು. ಸಾಹಿತ್ಯವು ಎಲ್ಲರನ್ನು ಸಾತ್ವಿಕರನ್ನಾಗಿ ಮಾಡುತ್ತದೆ ಎಂದು ಜಿಲ್ಲಾ ಸಂಸ್ಕಾರ ಭಾರತಿಯ ಅಧ್ಯಕ್ಷ ತಾರನಾಥ ಕೊಟ್ಟಾರಿ ಹೇಳಿದರು.

ಅವರು ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬಂಟ್ವಾಳ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ರಾಜ್ಯ ಕಾರ್ಯದರ್ಶಿ ಡಾ. ಮಾಧವ ಎಮ್.ಕೆ. ಸಭಾಧ್ಯಕ್ಷತೆ ವಹಿಸಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ರಾಷ್ಟ್ರೀಯ ಸಂಘಟನೆಯಾಗಿದ್ದು ಎಲ್ಲಾ ಭಾಷೆಯ ಸಾಹಿತ್ಯ ಸಂಸ್ಕೃತಿಯನ್ನು ಗೌರವಿಸುತ್ತದೆ ಎಂದು ಅಭಾಸಾಪ ಕಾರ್ಯ ವಿಸ್ತಾರದ ಬಗ್ಗೆ ತಿಳಿಸಿದರು.

ಜಿಲ್ಲಾ ಸಂಯೋಜಕ ಶೈಲೇಶ್ ಕಾರ್ಯಕ್ರಮ ಉದ್ಘಾಟಿಸಿ ಪದಾಧಿಕಾರಿಗಳ ಘೋಷಣೆ ಮಾಡಿದರು.ಡಾ. ಸುರೇಶ ನೆಗಳಗುಳಿ (ಅಧ್ಯಕ್ಷರು), ಪಲ್ಲವಿ ಕಾರಂತ ( ಉಪಾಧ್ಯಕ್ಷರು), ಮಾನಸ ವಿಜಯ ಕೈಂತಜೆ( ಕಾರ್ಯದರ್ಶಿ ) ಅಶೋಕ ಕುಮಾರ್ ಕಲ್ಯಟೆ(ಸಹಕಾರ್ಯದರ್ಶಿ ), ಪ್ರಶಾಂತ ಕಡ್ಯ ( ಕೋಶಾಧಿಕಾರಿ) ಜವಾಬ್ದಾರಿ ಸ್ವೀಕರಿಸಿದರು.

ಕಾರ್ಯಕಾರಿಣಿ ಸದಸ್ಯರಾಗಿ ಜಯಾನಂದ ಪೆರಾಜೆ, ರಮೇಶ್ ಬಾಯಾರು , ಈಶ್ವರಪ್ರಸಾದ ಕನ್ಯಾನ, ಡಾ. ವಾಣಿಶ್ರೀ ಕಾಸರಗೋಡು, ರೆಮಂಡ್ ಡಿಕುನ್ಹ, ಕುಮಾರಸ್ವಾಮಿ ಕನ್ಯಾನ, ಅಶೋಕ ಕಡೇಶ್ವಾಲ್ಯ, ಸೌಮ್ಯ ಕಲ್ಲಡ್ಕ, ಅಶೋಕ್ ಕುಮಾರ್ ಬರಿಮಾರು ಇವರನ್ನು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಡಾ. ವಿಶ್ವೇಶ್ವರ ವಿ.ಕೆ. ಅಡ್ಯನಡ್ಕ ಅಧ್ಯಕ್ಷತೆಯಲ್ಲಿ ಹಿರಿಯರ ಕವಿಗೋಷ್ಠಿ ನಡೆಯಿತು. ರಮೇಶ್ ಬಾಯಾರು ವಿದ್ಯಾರ್ಥಿಗಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಕಾಸರಗೋಡು ಗಡಿನಾಡು ಸಾಂಸ್ಕೃತಿಕ ತಂಡದಿಂದ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮ ಡಾ. ವಾಣೀಶ್ರೀ ನೇತೃತ್ವದಲ್ಲಿ ನಡೆಯಿತು.

ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಾನಸ ಕೈಂತಜೆ ನಿರೂಪಿಸಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಈಶ್ವರಪ್ರಸಾದ ಧನ್ಯವಾದ ಸಮರ್ಪಿಸಿದರು.

Leave a Comment