ಬಂಟ್ವಾಳ: ಆ.21ರಂದು ತಾಲೂಕು ದೇವಾಡಿಗ ಸಮಾಜದ ಸಮಾಲೋಚನಾ ಸಭೆ.

Coastal Bulletin
ಬಂಟ್ವಾಳ: ಆ.21ರಂದು ತಾಲೂಕು ದೇವಾಡಿಗ ಸಮಾಜದ ಸಮಾಲೋಚನಾ ಸಭೆ.

ಬಂಟ್ವಾಳ :ತಾಲೂಕಿನ ಸರ್ವ ದೇವಾಡಿಗ ಬಂಧುಗಳ ಸಮಾಲೋಚನಾ ಸಭೆಯನ್ನು ಇದೇ ಬರುವ ಆ 21ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 9.30ಗೆ ಸರಿಯಾಗಿ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಕರೆಯಲಾಗಿದೆ.

ದೇವಾಡಿಗ ಸಮಾಜದ ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಈ ಸಭೆಯನ್ನು ಕರೆಯಲಾಗಿದೆ. ಬಂಟ್ವಾಳ ತಾಲ್ಲೂಕಿನ ಎಲ್ಲ ದೇವಾಡಿಗ ಬಂಧುಗಳು ಈ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ದೇವಾಡಿಗ ಸೇವಾ ವೇದಿಕೆ. ಬಂಟ್ವಾಳ ಇದರ ಅಧ್ಯಕ್ಷ ರಾದ ಪದ್ಮನಾಭ ದೆವಾಡಿಗ ಬಂಟ್ವಾಳ ಇವರು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿರುತ್ತಾರೆ.

Leave a Comment