ರಾಯಿ: ವಿದ್ಯುತ್ ಮೀಟರ್ ರೀಡರ್ ಗೆ ನಾಯಿ ಕಡಿತ ಗಂಭೀರ ಗಾಯ,

Coastal Bulletin
ರಾಯಿ: ವಿದ್ಯುತ್ ಮೀಟರ್ ರೀಡರ್ ಗೆ ನಾಯಿ ಕಡಿತ ಗಂಭೀರ ಗಾಯ,

ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟ ಸ್ರ್ ಎಂಬಲ್ಲಿ ಮನೆ ಮನೆಗೆ ತೆರಳಿ ವಿದ್ಯುತ್ ಮೀಟರ್ ರೀಡಿಂಗ್ ನಡೆಸಿದ ಬಳಿಕ ರಸ್ತೆಯಲ್ಲಿ ಸಾಗುತ್ತಿದ್ದ ಮೀಟರ್ ರೀಡರ್ ಮೇಲೆ ಸಾಕು ನಾಯಿ ಎರಗಿ ಕೈಗೆ ಗಂಭೀರ ಗಾಯಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ಮುಡಿಪು ನಿವಾಸಿ, ಮೀಟರ್ ರೀಡರ್ ಸಿಬ್ಬಂದಿಗಳ ಮೇಲ್ವಿಚಾರಕ ಸಂಪತ್ ಆರ್.ಶೆಟ್ಟಿ ಎಂಬವರು ಸೋಮವಾರ ಕೈತ್ರೋಡಿ ಕ್ವಾಟ್ರಸ್ ಎಂಬಲ್ಲಿ ಕೆಲವೊಂದು ಮನೆಗಳಿಗೆ ತೆರಳಿ ಮೀಟರ್ ರೀಡಿಂಗ್ ನಡೆಸಿದ ಬಳಿಕ ಮುಖ್ಯರಸ್ತೆಯಲ್ಲಿ ತನ್ನ ಬೈಕಿನ ಕಡೆಗೆ ಹೋಗುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಇಲ್ಲಿನ ಮನೆಯೊಂದರಲ್ಲಿ ಕಟ್ಟಿ ಹಾಕಿದ್ದ ನಾಯಿ ಸಂಕೋಲೆ ಸಮೇತ ಓಡಿ ಬಂದು ಇವರ ಮೇಲೆ ಎರಗಿ ಬಲ ಕೈ ಮೇಲ್ಭಾಗಕ್ಕೆ ಕಚ್ಚಿದ ಪರಿಣಾಮ ಚರ್ಮ ಮತ್ತು ಮಾಂಸ ಕಿತ್ತು ಬಂದಿದೆ. ಇದರಿಂದಾಗಿ ಸ್ಥಳೀಯರು ಬಂದು ನಾಯಿಯನ್ನು ಓಡಿಸಿದ್ದು, ಗಂಭೀರ ಗಾಯಗೊಂಡು ರಕ್ತ ಸುರಿಯುತ್ತಿದ್ದಂತೆಯೇ ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆದುಕೊಂಡರು. ಇದೇ ವೇಳೆ ಸಿದ್ಧಕಟ್ಟೆ ಮೆಸ್ಕಾಂ ಎಂಜಿನಿಯರ್ ಯೋಗೀಶ್ ಬಂದು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಕಂಕನಾಡಿ

ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮಂಗಳವಾರ ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಆಕ್ರೋಶ:

ಬಂಟ್ವಾಳ ಉಪವಿಭಾಗ -2 ರ ವ್ಯಾಪ್ತಿಗೆ ಸಂಬಂಧಿಸಿದಂತೆ ವಾಮದಪದವು, ಸಿದ್ಧಕಟ್ಟೆ, ರಾಯಿ, ವಗ್ಗ, ಕಕ್ಯಪದವು, ಬಂಟ್ವಾಳ ಪೇಟೆ ಪ್ರದೇಶದಲ್ಲಿ 17 ಮಂದಿ ಹೊರ ಗುತ್ತಿಗೆ ಆಧಾರಿತ ಮೀಟರ್ ರೀಡರ್ ಗಳಿದ್ದಾರೆ. ರಾಯಿ ಪ್ರದೇಶದ ಮೀಟರ್ ರೀಡರ್ ಸೋಮವಾರ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಮೇಲ್ವಿಚಾರಕನಾಗಿದ್ದ ಸಂಪತ್ ಅವರೇ ಸ್ವತಃ ರೀಡಿಂಗ್ ಗೆ ತೆರಳಿದ್ದರು. ಅಸಂಘಟಿತ ಕಾರ್ಮಿಕರಾದ ಈ ಹೊರ ಗುತ್ತಿಗೆ ಆಧಾರಿತ ಮೀಟರ್ ರೀಡರ್ ಗಳ ಸಮಸ್ಯೆ ಬಗ್ಗೆ ಮೆಸ್ಕಾಂ ಇಲಾಖೆ ಮಾತ್ರ ತೀರಾ ಮೌನ ವಹಿಸಿದೆ ಎಂದು ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಾಳು ಸಂಪತ್ ಅವರಿಗೆ ಶಸ್ತ್ರಚಿಕಿತ್ಸೆಗೆ ಈಗಾಗಲೇ ರೂ 30 ಸಾವಿರಕ್ಕೂ ಮಿಕ್ಕಿ ಖರ್ಚಾ ಗಿದ್ದು, ಇದನ್ನು ಭರಿಸುವವವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

Leave a Comment