ಕಲ್ಲಡ್ಕ :ಬಂಟರ ಸಂಘದ ಅಶ್ರಯದಲ್ಲಿ ವಲಯ ಮಟ್ಟದ ಬಂಟ್ಸ್ ಪ್ರೀಮಿಯರ್ ಲೀಗ್ 2026.

Coastal Bulletin
ಕಲ್ಲಡ್ಕ :ಬಂಟರ ಸಂಘದ ಅಶ್ರಯದಲ್ಲಿ ವಲಯ ಮಟ್ಟದ ಬಂಟ್ಸ್ ಪ್ರೀಮಿಯರ್ ಲೀಗ್ 2026.

ಬಂಟ್ವಾಳ :ಕಲ್ಲಡ್ಕ ವಲಯ ಬಂಟರ ಸಂಘದ ಯುವ ವಿಭಾಗದ ನೇತೃತ್ವದಲ್ಲಿ , ಕಲ್ಲಡ್ಕ ವಲಯ ಬಂಟರ ಸಂಘ ಹಾಗೂ ಮಹಿಳಾ ವಿಭಾಗದ ಸಹಯೋಗದಲ್ಲಿ ವಲಯ ಮಟ್ಟದ ಪುರುಷರ ಬಂಟ್ಸ್ ಪ್ರೀಮಿಯರ್ ಲೀಗ್ 2026 ಸೀಸನ್ - 2 ಕ್ರಿಕೆಟ್ ಪಂದ್ಯಾಟ ಮತ್ತು ಮಹಿಳೆಯರ ಲಗೋರಿ ಪಂದ್ಯಾಟ ಫೆ.15ರಂದು ಪಾಣೆಮಂಗಳೂರು ಗ್ರಾಮದ ಬೊಂಡಾಲ ಕಾಪಿಕಾಡು ಕ್ರೀಡಾಂಗಣದಲ್ಲಿ ಜರುಗಿತು.


ಕಲ್ಲಡ್ಕ ವಲಯ ಬಂಟರ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಗೋಳ್ತಮಜಲು ದೀಪ ಬೆಳಗಿಸಿ ಪಂದ್ಯಾಟದ ಉದ್ಘಾಟನೆಯನ್ನು ಮಾಡಿ ಶುಭ ಹಾರೈಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಲಯ ಬಂಟರ ಸಂಘದ ಗೌರವಾಧ್ಯಕ್ಷರಾದ ಪದ್ಮನಾಭ ರೈ ಕಲ್ಲಡ್ಕ, ಬಂಟ್ವಾಳ ತಾಲೂಕು ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷರಾದ ಸುಜಾತ ಪಿ ರೈ,ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಾಲಕೃಷ್ಣ ಆಳ್ವ ಬೊಂಡಾಲ, ವಲಯ ಬಂಟರ ಸಂಘದ ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಂಞಂತಿಮಾರು, ಬಾಳ್ತಿಲ ಗ್ರಾಮ ಸಮಿತಿಯ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ ಸುಧೆಕ್ಕಾರು, ವೀರಕಂಭ ಗ್ರಾಮ ಸಮಿತಿಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಅರೆಬೆಟ್ಟು, ಗೋಳ್ತಮಜಲು ಗ್ರಾಮ ಸಮಿತಿಯ ಅಧ್ಯಕ್ಷರಾದ ಅಶೋಕ್ ಆಳ್ವ ಕೊಳಕಿರು, ಪಾಣೆಮಂಗಳೂರು ಗ್ರಾಮ ಸಮಿತಿಯ ಅಧ್ಯಕ್ಷ ರಾದ ಪ್ರೀತೇಶ್ ಮಾಣೈ ಬೊಂಡಾಲ ಗುತ್ತು, ಅಮ್ಟೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ಪೃಥ್ವಿರಾಜ್ ಆಳ್ವ ಅಥಿತಿಗಳಾಗಿ ಭಾಗವಹಿಸಿದರು. 

ಬಿಸಿರೋಡ್ ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ದಿವಾಕಾರ ಶೆಟ್ಟಿ ಕಾಂಪ್ರಬೈಲು ಬಹುಮಾನಗಳನ್ನು ಅನಾವರಣ ಗೊಳಿಸಿದರು. ಉದ್ಘಾಟನಾ ಭಾಗವಾಗಿ ಹಿರಿಯರಿಗೆ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾಟವನ್ನು ಆಡಿಸಲಾಯಿತು. ವಲಯ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ರಾದ ಸುನಾದ್ ರಾಜ್ ಶೆಟ್ಟಿ ರವರು ಅತಿಥಿಗಳನ್ನು ಸ್ವಾಗತಿಸಿದರು, ವಲಯ ಬಂಟರ ಸಂಘದ ಕಾರ್ಯದರ್ಶಿ ನಾಗೇಶ್ ಶೆಟ್ಟಿ ಬೊಂಡಾಲ ಕಾರ್ಯಕ್ರಮ ನಿರೂಪಿಸಿದರು. 

ನಂತರ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಗಣೇಶ್ ಶೆಟ್ಟಿ ಗೋಳ್ತಮಜಲು ಮಾಲಿಕತ್ವದ ಬಂಟ್ಸ್ ಸ್ಟ್ರೈಕರ್ಸ್, ರತ್ನಾಕರ ಶೆಟ್ಟಿ ಕಲ್ಲಡ್ಕ, ಮಹೇಶ್ ಶೆಟ್ಟಿ , ಅಶೋಕ್ ಆಳ್ವ, ನಿಶಾಂತ್ ರೈ ವೀರಕಂಭ ಮಾಲಿಕತ್ವದ ಬಂಟ್ಸ್ ಟೈಗರ್ಸ್, ದಾಮೋದರ ಶೆಟ್ಟಿ ಸುಧೆಕ್ಕಾರು ಮಾಲಿಕತ್ವದ ಬಂಟ್ಸ್ ಚಾಲೆಂಜರ್ಸ್ , ಸಂದೀಪ್ ಶೆಟ್ಟಿ ಅರೆಬೆಟ್ಟು ಮಾಲಿಕತ್ವದ ಬಂಟ್ಸ್ ವಾರಿಯರ್ಸ್ , ಸಂತೋಷ್ ಶೆಟ್ಟಿ ಪೆಲತಡ್ಕ ಮಾಲಿಕತ್ವದ ಬಂಟ್ಸ್ ರಾಯಲ್ಸ್ , ಸತೀಶ್

ಶೆಟ್ಟಿ ಬೊಂಡಾಲ, ರವಿರಾಜ್ ಭಂಡಾರಿ ಬೊಂಡಾಲ, ಪ್ರೇಮ್ ಕುಮಾರ್ ಶೆಟ್ಟಿ ಬೊಂಡಾಲ ಮಾಲಿಕತ್ವದ ಬಂಟ್ಸ್ ಅಟ್ಟ್ಯಾಕರ್ಸ್ ತಂಡಗಳ ನಡುವೆ ಲೀಗ್ ಮಾದರಿಯ ಪಂದ್ಯಾಟ ನಡೆಯಿತು. ಮಹಿಳೆಯ ಲಗೋರಿ ಪಂದ್ಯಾಟದಲ್ಲಿ ನೀನಾ ಉದಯ ರೈ ಮಾಲಿಕತ್ವದ ಟೀಮ್ ಶ್ರೇಷ್ಠ, ಸುಲೋಚನ ಶೆಟ್ಟಿ ಮಾಲಿಕತ್ವದ ಟೀಮ್ ಶಕ್ತಿ, ಪ್ರಜ್ಞಾ ಎಸ್ ರೈ ಮಾಲಿಕತ್ವದ ಟೀಮ್ ಸಪ್ತ, ಅನಿತಾ ಸಂತೋಷ್ ಶೆಟ್ಟಿ ರವರ ಮಾಲಿಕತ್ವದ ಟೀಮ್ ಸೌರ್ಯ ತಂಡಗಳ ನಡುವೆ ಪಂದ್ಯಾಟ ನಡೆಯಿತು. 

ಕ್ರೀಡಾಕೂಟಕ್ಕೆ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ರಾದ ಜಗನ್ನಾಥ ಚೌಟ ಬದಿಗುಡ್ಡೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರತಿಭಾ ಆತ್ಮರಂಜನ್ ರೈ, ತಾಲೂಕು ಯುವ ವಿಭಾಗದ ಅಧ್ಯಕ್ಷರಾದ ಗೋಕುಲ್ ಭಂಡಾರಿ,ಉದ್ಯಮಿಗಳಾದ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಸಂದೇಶ್ ಶೆಟ್ಟಿ ಅರೆಬೆಟ್ಟು, ತಾಲೂಕು ಮಹಿಳಾ ವಿಭಾಗದ ಮಾಜಿ ಅಧ್ಯಕ್ಷರಾದ ಆಶಾ ರೈ ಬಿಸಿ ರೋಡ್ ಭಾಗವಹಿಸಿ ಶುಭ ಹಾರೈಸಿದರು. 

ಕ್ರಿಕೆಟ್ ಪಂದ್ಯಾಟದಲ್ಲಿ ದಾಮೋದರ ಶೆಟ್ಟಿ ಸುಧೆಕ್ಕಾರು ಮಾಲಿಕತ್ವದ ಬಂಟ್ಸ್ ಚಾಲೆಂಜರ್ಸ್ ತಂಡ ಪ್ರಥಮ ಸ್ಥಾನವನ್ನು, ರತ್ನಾಕರ ಶೆಟ್ಟಿ ಮಾಲಿಕತ್ವದ ಬಂಟ್ಸ್ ಟೈಗರ್ಸ್ ತಂಡ ದ್ವಿತೀಯ ಸ್ಥಾನವನ್ನು , ಸಂತೋಷ್ ಶೆಟ್ಟಿ ಪೆಲತಡ್ಕ ಮಾಲಿಕತ್ವದ ಬಂಟ್ಸ್ ರಾಯಲ್ಸ್ ತಂಡ ತೃತೀಯ ಸ್ಥಾನವನ್ನು, ಸತೀಶ್ ಶೆಟ್ಟಿ ಮಾಲಿಕತ್ವದ ಬಂಟ್ಸ್ ಅಟ್ಟ್ಯಾಕರ್ಸ್ ತಂಡ ಚತುರ್ಥ ಸ್ಥಾನ ವನ್ನು ಪಡೆಯಿತು. ಮಹಿಳೆಯರ ಲಗೋರಿ ಪಂದ್ಯಾಟ ದಲ್ಲಿ ಪ್ರಜ್ಞಾ ಎಸ್ ರೈ ಮಾಲಿಕತ್ವದ ಸಪ್ತ ತಂಡ ಪ್ರಥಮ ಸ್ಥಾನ ಮತ್ತು ನೀನಾ ಉದಯ ರೈ ಮಾಲಿಕತ್ವದ ಶ್ರೇಷ್ಠ ತಂಡ ದ್ವಿತೀಯ ಸ್ಥಾನ ಪಡೆಯಿತು.

ವಲಯ ಮಟ್ಟದ ಪುರುಷರ ಬಂಟ್ಸ್ ಪ್ರೀಮಿಯರ್ ಲೀಗ್ 2026 ಸೀಸನ್ - 2 ಕ್ರಿಕೆಟ್ ಪಂದ್ಯಾಟ ಮತ್ತು ಮಹಿಳೆಯರ ಲಗೋರಿ ಪಂದ್ಯಾಟವು ಕ್ರೀಡಾ ಕೂಟದ ಸಂಚಾಲಕರಾದ ಸಂತೋಷ್ ಶೆಟ್ಟಿ ಸೀನಾಜೆ ಸಂಚಾಲಕತ್ವದಲ್ಲಿ ಯಶಸ್ವಿಯಾಗಿ ನಡೆಯಿತು.

Leave a Comment