ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ತುಂಬೆ ಗ್ರಾಮದ ಮಲ್ಲಿ ಎಂಬಲ್ಲಿಯ ಸರ್ವೇ ನಂಬ್ರ 9/2 ರಲ್ಲಿ ಒಟ್ಟು 4.46 ಎಕ್ರೆ ಜಮೀನಿನಲ್ಲಿ ಕ್ರೀಡಾಂಗಣ 3.30 ಎಕ್ರೆ, ಒಣತ್ಯಾಜ್ಯ ಘಟಕ 0.34 ಎಕೆ, ಗ್ರಾಮ ಆಡಳಿತಾಧಿಕಾರಿ ವಸತಿ ಗೃಹ 0.40 ಎಕೆ, ಗ್ರಾಮ ಪಂಚಾಯತ್ ಸಿಬ್ಬಂದಿಗಳ ವಸತಿ ಗೃಹ 0.42 ಎಕ್ರೆ ಜಮೀನು ಎ.ಸಿ ಮಂಗಳೂರು ಆದೇಶದಂತೆ ಮಂಜೂರಾತಿ ಪಡೆದು ಗ್ರಾಮ ಆಡಳಿತಾಧಿಕಾರಿ ಯವರು ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಕೇಶವ, ಉಪಾಧ್ಯಕ್ಷರಾದ ಗಣೇಶ್ ಸಾಲ್ಯಾನ್ ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಗ್ರಾಮ ಪಂಚಾಯತ್ ಸದಸ್ಯರಾದ ಹೇಮಾಲತ, ಅರುಣ್ ಕುಮಾರ್, ಕಿಶೋರ್, ಮಹಮದ್ ಝಹೂರ್, ಅಬ್ದುಲ್
ಅಝೀಜ್, ಇಬ್ರಾಹಿಂ, ಶಶಿಕಲಾ, ಮುನೀರಾ, ಅತಿಕ ಬಾನು, ಜಯಂತಿ ಶ್ರೀಧರ, ಜಯಂತಿ ನಾಗೇಶ್, ಗ್ರಾಮದ ಪ್ರಮುಖರಾದ ಇರ್ಫಾನ್, ತುಂಬೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶಿವುಲಾಲ್ ಚವ್ಹಾಣ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಚಂದ್ರಕಲಾ ಜಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.















