ಮಾಣಿ :ಮಾತೃಭೂಮಿ ಸೇವಾಸಂಘದಿಂದ ಮಾದಕ ವಸ್ತು, ಮೊಬೈಲ್‌ ಅವಲಂಬನೆ ಕುರಿತು ಜಾಗೃತಿ. ಸಂಘಟನೆಗಳು ಸಮಾಜಮುಖಿಯಾದರೆ ಸಮಾಜದ ಅಭಿವೃದ್ಧಿ ಸಾಧ್ಯ :ಸುದೀಪ್ ಕುಮಾರ್ ಶೆಟ್ಟಿ.

Coastal Bulletin
ಮಾಣಿ :ಮಾತೃಭೂಮಿ ಸೇವಾಸಂಘದಿಂದ ಮಾದಕ ವಸ್ತು, ಮೊಬೈಲ್‌ ಅವಲಂಬನೆ ಕುರಿತು ಜಾಗೃತಿ. ಸಂಘಟನೆಗಳು ಸಮಾಜಮುಖಿಯಾದರೆ ಸಮಾಜದ ಅಭಿವೃದ್ಧಿ ಸಾಧ್ಯ :ಸುದೀಪ್ ಕುಮಾರ್ ಶೆಟ್ಟಿ.

ಬಂಟ್ವಾಳ : ಸಂಘ ಸಂಸ್ಥೆಗಳು ಸಮಾಜಮುಖಿ ಯಾದಾಗ ಸಮಾಜದ ಅಭಿವೃದ್ಧಿಗಳು ಸಾಧ್ಯ ಎಂದು ಮಾಣಿ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ‌ಸುದೀಪ್ ಕುಮಾರ್ ಶೆಟ್ಟಿ ಮಾಣಿ ಇವರು ನುಡಿದರು.

ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿಯಲ್ಲಿ ಮಾತೃಭೂಮಿ ಸೇವಾ ಸಂಘ ನಾವೂರು ಬಂಟ್ವಾಳ ಇವರು ಆಯೋಜನೆ ಮಾಡಿದ  ಮದ್ಯಮಾದಕ ವಸ್ತು ಹಾಗೂ ಮೊಬೈಲ್‌ ಅವಲಂಬನೆಯ ಕುರಿತು ವಿದ್ಯಾರ್ಥಿಗಳಿಗೆ ನಡೆಸಿದ ಜಾಗೃತಿ ಕಾರ್ಯಕ್ರಮ ಹಾಗೂ ಸಮಾಜಸೇವೆ ಸಮಾಜಮುಖಿ ಚಿಂತಕರು ಮುಖ್ಯ ಶಿಕ್ಷಕರಾದ  ಚಂದ್ರಾವತಿ ಇವರಿಗೆ ಅರ್ಪಣೆ ಮಾಡಿದ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣ ಇಲಾಖೆಯ BRTI  ಸುರೇಖಾ  SDMC ಯ ಅಧ್ಯಕ್ಷರು ಹಾಗೂ ಸದಸ್ಯರು,ಮಾತೃಭೂಮಿ

ಸೇವಾ ಸಂಘದ ಸಂಘಟಕರಾದ ನವೀನ್ ನಂತೂರು, ತಾರಾನಾಥ ಮಲೆಬಾವು ಹಾಗೂ ಉಪಸ್ಥಿತಿ ಇದ್ದು ಸಂಘದ ನಿರ್ದೇಶಕರು ಹಾಗೂ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿಯ ECRC ಪ್ರಬಂಧಕರು, ಸುರೇಶ್ ಎಸ್. ನಾವೂರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಟ್ಲ ಠಾಣೆ ಆರಕ್ಷಕರಾದ ಶ್ರೀ ಸಿದ್ದು ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.ಸಹಶಿಕ್ಷಕರಾದ ಪ್ರಮೀಳಾ ನಿರೂಪಿಸಿದರೆ,ಶಾಲೆಯ ಮಕ್ಕಳು ಪ್ರಾರ್ಥಿಸಿದರು.ಶಿಕ್ಷಕಿ ಅಮೃತಾ.ಎಸ್.ಜೋಶಿ ಸ್ವಾಗತಿಸಿದರು. ಪ್ರಮೀಳಾ ವಂದಿಸಿದರು.

Leave a Comment