ಬಂಟ್ವಾಳ :ನವೋದಯ ಮಿತ್ರ ಕಲಾವೃಂದ (ರಿ.) ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ "ರಕ್ತದಾನ ಶಿಬಿರ" ಸೆ.27ನೇ ಆದಿತ್ಯವಾರ ಬೆಳಗ್ಗೆ 9.00ರಿಂದ 12.00ರವರೆಗೆ ನೆತ್ತರಕೆರೆ ವಸಂತಿ ವಿಠ್ಠಲ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ನವೋದಯ ಮಿತ್ರ ಕಲಾವೃಂದ ಅಧ್ಯಕ್ಷ ಜಗದೀಶ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











