ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಕುಂಪಣಮಜಲಿನಿಂದ ತೇವು, ಕಲ್ಲತಡಮೆ ಪದಂಜಾರು ರಸ್ತೆಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಸಂಪೂರ್ಣ ಹದಗೆಟ್ಟು ಮಳೆಗಾಲದಲ್ಲಿ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದ್ದು ಶೀಘ್ರವಾಗಿ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಮಾಡಬೇಕೆಂದು ಸ್ಥಳೀಯ ನಾಗರಿಕರಿಕರು ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಪಿ ಡಿ ಒ ರವರಿಗೆ ಮನವಿ ಸಲ್ಲಿಸಿದರು.
ಪುದು ಗ್ರಾಮಕ್ಕೆ ಸಂಬಂಧಿಸಿದ ಕುಂಪಣಮಜಲಿನಿಂದ ತೇವು, ಪದಂಜಾರು, ಕಲ್ಲತಡಮೆ ಎಂಬ ಪ್ರದೇಶವು ಜನನಿಬಿಡ ಪ್ರದೇಶವಾಗಿದ್ದು ಹಲವಾರು ವರ್ಷಗಳಿಂದ ಮುಖ್ಯ ರಸ್ತೆಗೆ ಚರಂಡಿ ಇಲ್ಲದಿರುವುದರಿಂದ ಇಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಳೆಗಾಲದಲ್ಲಿ ಈ ಪ್ರದೇಶದ ದಿನನಿತ್ಯ ಓಡಾಡುವ ಜನರಿಗೆ ಹಿರಿಯ ನಾಗರಿಕರಿಗೆ ಶಾಲಾ ವಾಹನ, ರಿಕ್ಷಾ, ಇನ್ನಿತರ ವಾಹನ ಸಂಚಾರಕ್ಕೆ ಮತ್ತು ತುರ್ತು ಸೇವೆಗೆ ಜನರು ನರಕ ಯಾತನೆ ಅನುಭವಿಸುವಂತಾಗಿದೆ.
ಇಲ್ಲಿನ
ಸಮಸ್ಯೆಗಳನ್ನು ಜನಪ್ರತಿನಿಧಿಗಳ ಬಳಿ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗದೇ ಗ್ರಾಮ ಸಭೆಯಲ್ಲಿಯೂ ಈ ಬಗ್ಗೆ ವಿನಂತಿಸಿಕೊಂಡರೂ ಈ ಪ್ರದೇಶದ ನಿರ್ಲಕ್ಷ್ಯಮಾಡಿದ್ದೂ ಮುಂದಿನ ದಿನಗಳಲ್ಲಿ ನಮ್ಮ ದೂರು ಅರ್ಜಿಯನ್ನು ಪರಿಶೀಲನೆ ಮಾಡಿ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಪ್ರದೇಶಕ್ಕೆ ತುರ್ತು ಭೇಟಿ ನೀಡಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ಕುಂಪಣಮಜಲು, ತೇವು, ಕಲ್ಲತಡಮೆ ಪದಂಜಾರು ನಾಗರಿಕರು ಮನವಿಯಲ್ಲಿ ವಿನಂತಿಸಿದ್ದಾರೆ















