ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಫೆ.೧೮ರಿಂದ ೨೨ರವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅದ್ದೂರಿಯ ಹೊರೆಕಾಣಿಕೆ ಮೆರವಣಿಗೆ ಭಾನುವಾರ ನಡೆಯಿತು.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ವೈಭವದ ಹೊರೆಕಾಣಿಕೆ ಮೆರವಣಿಗೆ ಮಂಗಾಜೆ ಧನುಪೂಜೆ ಮಾರ್ಗವಾಗಿ ವಾಹನಗಳೊಂದಿಗೆ ಕಲ್ಪನೆಯಲ್ಲಿ ಸೇರಿ, ಬಳಿಕ ಕಾಲ್ನಡಿಗೆ ಮೂಲಕ ಹೊರಟು ಕಾವೇಶ್ವರ ಮಾರ್ಗವಾಗಿ ಆದಿಶಕ್ತಿ ದೇವಸ್ಥಾನಕ್ಕೆ ಸಾಗಿತು. ಬೆಳ್ಳೂರು, ಪಲ್ಲಿಪ್ಪಾಡಿ, ಕರಿಯಂಗಳ, ಅಡ್ಡೂರು, ಕಳಸಗುರಿ, ಕಲಾಯಿ, ಅಮ್ಮುಂಜೆ, ಬಡಕಬೈಲ್, ತೆಂಕಬೆಳ್ಳೂರು, ಕೊಪ್ಪಲ, ತರಾವು,ಅಜ್ಜಿನಡ್ಕ, ಕಾವೇಶ್ವರ, ಈಶನಗರ, ಬೆಂಜನಪದವು, ಪಚ್ಚಿನಡ್ಕ, ಬಿ.ಸಿ.ರೋಡ್ ನಿಂದ ಭಕ್ತರು ಚೆಂಡೆ, ವಾಲಗ, ಕುಣಿತ ಭಜನೆಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದರು.
ಕಾವೇಶ್ವರ ದೇವಸ್ಥಾನದ ಮೊಕ್ತೇಸರರಾದ ರಘುವೀರ ಶೆಟ್ಟಿ ಹಾಗೂ ಅರ್ಚಕ ರಘುರಾಮ ಮಯ್ಯ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಬಡಗಬೆಳ್ಳೂರು ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘು ಎಲ್. ಶೆಟ್ಟಿ, ಕಾರ್ಯಾಧ್ಯಕ್ಷ ಉಮೇಶ್ ಸಾಲ್ಯಾನ್ ಬೆಂಜನಪದವು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಲ್ಲಿಪ್ಪಾಡಿ, ಕೋಶಾಕಾರಿ ಸಂಕೇತ್ ಈಶನಗರ, ಕಾರ್ಯಾಧ್ಯಕ್ಷರಾದ ಗಂಗಾಧರ ಜೆ. ಪೂಜಾರಿ ಕೊಪ್ಪಲ,
ಸಂದೀಪ್ ಸದಾಶಿವ ಬೊಳ್ಳೂರು, ಸಂಘಟನಾ ಕಾರ್ಯದರ್ಶಿಗಳಾದ ಪುಷ್ಪರಾಜ್ ಶೆಟ್ಟಿ ಕಮ್ಮಾಜೆ, ಪ್ರಸನ್ನ ಕುಮಾರ್, ಮಾಧವ ಡಿ.ಬಂಗೇರ, ಕಾರ್ಯದರ್ಶಿ ರೋಷನ್ ಅಮೀನ್, ಯತೀಶ್ ಎಸ್. ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ, ಕಾರ್ಯದರ್ಶಿ ಪ್ರಸಾದ್ ಗರೋಡಿ, ಕೋಶಾಕಾರಿ ರಾಜು ಕೋಟ್ಯಾನ್, ಉಪಾಧ್ಯಕ್ಷರಾದ ವೆಂಕಟೇಶ ನಾವಡ ಪೊಳಲಿ, ಉಮೇಶ್ ಆಚಾರ್ ಕರಿಯಂಗಳ, ಯಶವಂತ ಪೊಳಲಿ, ಲಕ್ಷ್ಮೀಶ ಶೆಟ್ಟಿ, ರಮೇಶ್ ಪೂಜಾರಿ ಬಟ್ಟಾಜೆ, ಜೊತೆ ಕೋಶಾಕಾರಿ ಯಶೋಧರ ಪೊಳಲಿ, ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಎಂ.ಬೆಳ್ಳೂರು, ಪ್ರಮುಖರಾದ ಜಯರಾಮ ಶೆಟ್ಟಿ, ರಾಧಾ ಲೋಕೇಶ್ ಕರಿಯಂಗಳ, ರೂಪಾ ನಾರಾಯಣ ನಾಯ್ಕ್, ಕಿಶೋರ್ ಭಂಡಾರಿ, ಹೊರೆಕಾಣಿಕೆ ಸಮಿತಿ ಸಂಚಾಲಕ ಗಣೇಶ್ ಪ್ರಸಾದ್ ವರಕೋಡಿ, ಸಹಸಂಚಾಲಕರಾದ ತಿರುಲೇಶ್ ಕಾವೇಶ್ವರ, ಯೋಗೇಂದ್ರ ಗುಂಡಿಕುಮೇರ್ , ರಮಾನಾಥ ಅಮೀನ್, ಶಶಿಕಿರಣ್ ಪೂಜಾರಿ ಸಹಿತ ನಾನಾ ಸಮಿತಿಗಳ ಪದಾಕಾರಿಗಳು, ಸಂಚಾಲಕರು ಉಪಸ್ಥಿತರಿದ್ದರು.















