ಬಂಟ್ವಾಳ: ತಾಲ್ಲೂಕಿನ ಪುಂಜಾಲಕಟ್ಟೆಯಲ್ಲಿ ಪ್ರೋ ಕಬಡ್ಡಿ ಮತ್ತು ಪುನೀತ್ ರಾಜ್ ಕುಮಾರ್ ಯುವರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಒಳಾಂಗಣ ಕ್ರೀಡಾಂಗಣ ಸಿದ್ಧಗೊಳ್ಳುತ್ತಿದೆ.
ಇಲ್ಲಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಇದೇ 18ರಿಂದ 19ರತನಕ ಪ್ರೋ ಕಬಡ್ಡಿ ಪಂದ್ಯಾಟ ಮತ್ತು ರಾಜ್ಯದಲ್ಲೇ ಪ್ರಥಮ ಬಾರಿಗೆ 'ಪುನೀತ್ ರಾಜ್ಕುಮಾರ್' ಯುವರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಲಬ್ಬಿನ ಸ್ಥಾಪಕಾಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಇದೇ 18ರಂದು ಬೆಳಿಗ್ಗೆ ಕಬಡ್ಡಿ ಪಂದ್ಯಾಟ ಆರಂಭಗೊಂಡು, 19ರಂದು ಸಮಾರೋಪಗೊಳ್ಳಲಿದೆ. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ 'ಸ್ವಸ್ತಿಕ್ ಸಂಭ್ರಮ' ಪುರಸ್ಕಾರ
ಮತ್ತು 'ಸ್ವಸ್ತಿ ಸಿರಿ' ರಾಜ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ. 'ಪುನೀತ್ ರಾಜ್ಕುಮಾರ್ ಯುವರತ್ನ ಪ್ರಶಸ್ತಿ'ಗೆ ಕಬಡ್ಡಿ ಆಟಗಾರರಾದ ಕೌಶಿಕ್ ಎಚ್. ಮಂಜಲಪಲ್ಕೆ ಮತ್ತು ಮಹಮ್ಮದ್ ಸಫರ್ಾಜ್ ಆಲಿ ಆಯ್ಕೆಯಾಗಿದ್ದಾರೆ.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ'ಗೆ ಪಾಣಿಲ ಬಾಡ ಪೂಜಾರಿ(ಕಂಬಳ), ಕಾಂತಿ ಶೆಟ್ಟಿ (ಸಮಾಜ ಸೇವೆ), ಡಾ. ನಂದಕಿಶೋರ್ ಆಳ್ವ (ವೈದಕೀಯ ಕ್ಷೇತ್ರ), ಸದಾಶಿವ ಡಿ.ತುಂಬೆ (ಸಾಂಸ್ಕೃತಿಕ), ನಿತ್ಯಾನಂದ ಪೂಜಾರಿ ಕೆಂತಲೆ(ಉದ್ಯಮ) ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














