Coastal Bulletin

ಬಂಟ್ವಾಳ :ಜೆಸಿಐ ಬಂಟ್ವಾಳ ಜೆಸಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಭಂಡಾರಿ ಸಭಾಭವನದಲ್ಲಿ ಸೆ 15ರಂದು ಗುರುವಾರ ಅದ್ದೂರಿಯಾಗಿ ಸಂಭ್ರಮದಿಂದ ನಡೆಸಲಾಯಿತು.

ಸೆ 9ರಿಂದ 15ರ ತನಕ ನಡೆದ ಜೆಸಿ ಸಪ್ತಾಹದ   ಮೊದಲನೇ ದಿನ ಸಿದ್ದಕಟ್ಟೆ ಗುಂಡೂರಿ ಸೇವಾಶ್ರಮದಲ್ಲಿ ಆಶ್ರಮವಾಸಿಗಳಿಗೆ ಮಧ್ಯಾಹ್ನದ ಭೋಜನ ಹಾಗೂ ದಿನಸಿ ಸಾಮಗ್ರಿಗಳ ಕಿಟ್ಟು ವಿತರಣೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಅದೇ ದಿನ ಸಾಯಂಕಾಲ ಮೂರು ಮಂದಿ ಮಹಿಳಾ ಸಾಧಕೀಯರನ್ನು ಗುರುತಿಸಿ ಸನ್ಮಾನಿಸಲಾಯಿತು ಮಹಿಳೆಯರಿಗೆ ಉದ್ಯೋಗ ಕೌಶಲ್ಯ ತರಬೇತಿಯನ್ನು ನೀಡಲಾಯಿತು.

ಎರಡನೇ ದಿವಸ ನಲ್ಕೆಮಾರ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಆರೋಗ್ಯ ತಪಾಸನ ಶಿಬಿರವನ್ನು ಹಾಗೂ ಊರಿನ ನಾಗರಿಕರಿಗೆ ಆ.ಭಾ ಕಾರ್ಡ್ ವಿತರಣೆಯನ್ನು ಮಾಡಲಾಯಿತು, ರೋಟರಿ ಕ್ಲಬ್ ಮಾಡಂಕಾಪು ಇದರ ಜೊತೆಗೆ ಜಂಟಿ ಸಭೆಯನ್ನು ನಡೆಸಲಾಯಿತು.

 ಮೂರನೇ ದಿವಸದ ಕಾರ್ಯಕ್ರಮದಲ್ಲಿ ಶ್ರೀ ಅಂಬಿಕಾ ಮಿತ್ರ ಮಂಡಳಿ ರಿಜಿಸ್ಟರ್ ಮೊಂತಿಮಾರು ಇದರ ಸಹಾಯದಲ್ಲಿ ಸ್ಥಳೀಯ ಯುವಕರಿಗೆ ವಾಲಿಬಾಲ್ ಪಂದ್ಯಾಟ ಹಾಗೂ ಜೆಸಿ ಸದಸ್ಯರು ಮತ್ತು ಮಿತ್ರ ಮಂಡಳಿಯ ಸದಸ್ಯರಿಗೆ ಚೆಸ್ ಪಂದ್ಯಾಟ ನಡೆಸಿ ಬಹುಮಾನ ವಿತರಿಸಲಾಯಿತು.

 ನಾಲ್ಕನೆಯ ದಿವಸ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸಿದ್ದಕಟ್ಟೆ ಪಾಲ್ಗುಣಿ ಇದರ ಜಂಟಿ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ಪಂಜಿ ಕಲ್ಲು ಇಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ಅದೇ ದಿನ ಸಾಯಂಕಾಲ ಜನರಲ್ಲಿ ಜಾಗೃತಿ ಮೂಡಿಸಲು ಪ್ಲಾಸ್ಟಿಕ್ ಚೀಲ ಮುಕ್ತ ಭಾರತ ಜಾತವನ್ನು ಏರ್ಪಡಿಸಲಾಯಿತು.

 ಐದನೆಯ ದಿವಸದ ಕಾರ್ಯಕ್ರಮದಲ್ಲಿ ದೀಪಿಕಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಮಾಡಲಾಯಿತು

ಜನರಲ್ಲಿ ಪ್ರಾಮಾಣಿಕತೆಯನ್ನು ಮೂಡಿಸುವ ದೃಷ್ಟಿಯಿಂದ ಬಿಸಿ ರೋಡಿನ ಹೃದಯಾ ಭಾಗದಲ್ಲಿ ಹೋನೆಸ್ಟಿ ಶಾಪನ್ನು ಮಾಡಲಾಯಿತು.

 ಆರನೆಯ ದಿವಸದ ಕಾರ್ಯಕ್ರಮದಲ್ಲಿ ಸೀನಿಯರ್ ಮೆಂಬರ್ಸ ಅಸೋಸಿಯೇಷನ್ ಹಾಗೂ ಜೆ ಕಮ್ ಓರಿಯೆಂಟೇಶನ್ ನಡೆಸಲಾಯಿತು ನಂತರ ವ್ಯವಹಾರದ ಮಾಹಿತಿ ನೀಡಲಾಯಿತು.

  ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಕೆ ನಾರಾಯಣ್ ನಾಯಕ್ ಹಾಗೂ ಸಮಾಜ ಸೇವೆ ಹಾಗೂ ಉದ್ಯಮ  ಕ್ಷೇತ್ರದ ಸಾಧನೆಯನ್ನು ಗುರುತಿಸಿ ಕಮಲ ಪತ್ರ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

 ನಾಲ್ಕು ಮಂದಿ ಜೇ ಸಿ ಸದಸ್ಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

 ಪೂರ್ವ ವಲಯ ಅಧ್ಯಕ್ಷ ಜೆ ಸಿ ಹೆಚ್ ಜಿ ಎಫ್ ಕಿರಣ್ ಹೆಗ್ಡೆ ,ಪೂರ್ವ ವಲಯ ಉಪಾಧ್ಯಕ್ಷ ಜೆಎಫ್ಎಂ ಸಮದ್ ಖಾನ್ ,ರೊಟೇರಿಯನ್ ಗಣೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಸಮಾರಂಭಕ್ಕೆ ಮೆರುಗು ನೀಡಿದರು. ಜೆ ಸಿ ಐ ಬಂಟ್ವಾಳದ ಅಧ್ಯಕ್ಷ ಜೆ ಸಿ ಎಚ್ ಜಿ ಎಫ್ ರೋಷನ್ ರೈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು, ವಲಯ ಅಧಿಕಾರಿಗಳಾದ ಜೆಎಫ್ಎಂ ರಶ್ಮಿ ಶೆಟ್ಟಿ ಜೆಸಿ ಸಂತೋಷ್ ಜೈನ್ ನಿಕಟ ಪೂರ್ವ ಅಧ್ಯಕ್ಷರಾದ ಜೆಸಿಎಚ್ಜಿಎಫ್ ಉಮೇಶ್ ಮೂಲ್ಯ, ಕಾರ್ಯದರ್ಶಿ ಜೆಸಿ ರವೀನಾ ಬಂಗೇರ, ಕಾರ್ಯಕ್ರಮ ನಿರ್ದೇಶಕ ಸದಾನಂದ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದಿಶಾನ್ ಮೆಲೋಡಿಸ್ ಬೋಲಿಯಾರ್ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಲಾಯಿತು.

Leave a Comment