Coastal Bulletin

ಬಂಟ್ವಾಳ:ಇಲ್ಲಿಗೆ ಸಮೀಪದ ಮೂಲರಪಟ್ಣ ದಲ್ಲಿರುವ ನವೀಕೃತ ಮುಹಿಯುದ್ದೀನ್ ಜುಮಾ ಮಸೀದಿಯ ಲೊಕಾರ್ಪಣಾ ಕಾರ್ಯಕ್ರಮವು ಮಾ. 18 ಮತ್ತು 19ರಂದು ನಡೆಯಲಿದೆ ಎಂದುಮಸೀದಿ ಅಧ್ಯಕ್ಷ ಎಂ.ಬಿ.ಅಶ್ರಫ್ ತಿಳಿಸಿದ್ದಾರೆ.

ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸುಮಾರು 800 ವರ್ಷಗಳ ಇತಿಹಾಸವಿರುವ ಪುರಾತನಾದ ಈ ಮಸೀದಿಯನ್ನು ಸುಮಾರು ಎರಡೂವರೆ ಕೋ.ರೂ. ವೆಚ್ಚದಲ್ಲಿ ನವೀಕೃತಗೊಳಿಸಲಾಗಿದ್ದು,ಇದೀಗ ಲೋಕಾರ್ಪಣೆಗೆ ಸಜ್ಜಾಗಿದೆ ಎಂದರು.

ಜಮಾತ್ ಭಾಂದವರ ಹಾಗೂ ಸರ್ವ ಧರ್ಮೀಯರ ಸಹಕಾರದೊಂದಿಗೆ ಸುಸಜ್ಜಿತವಾಗಿ ಮಸೀದಿಯ ಒಳಭಾಗದಲ್ಲಿ ವಿಶಿಷ್ಟ ಶೈಲಿಯ ಮರದ ಕೆತ್ತನೆಯೊಂದಿಗೆ ವಿಶಾಲವಾದ ಹವಾ ನಿಯಂತ್ರಿತವನ್ನು ಹೊಂದಿದೆ ಎಂದರು.

ಸೈಯ್ಯದ್ ಮೊಹಮ್ಮದ್ ಜಿಫ್ರಿ ಮುತ್ತುಕೋಯ ತಂಜಲ್ ಅವರ ನೇತೃತ್ವದಲ್ಲಿ ಲೋಕಾರ್ಪಣೆ ಹಾಗೂ 2 ದಿವಸಗಳ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿದೆ

ಎಂದರು.

ಮಾ.18 ರಂದು ಮಧ್ಯಾಹ್ನ 2 ಗಂಟೆಯಿಂದ ಮಗ್ರಿಬ್ ನಮಾಝ್ ವರೆಗೆ ಮಹಿಳೆಯರಿಗೆ ಮುಹಿಯುದ್ದೀನ್ ಜುಮಾ ಮಸೀದಿ ನೋಡಲು ಮುಕ್ತ ಅವಕಾಶವಿರುತ್ತದೆ ರಾತ್ರಿ ಪ್ರಭಾಷಣ.ಮಾ.19 ರಂದು ಬೆಳಿಗ್ಗೆ ಮಸೀದೊಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು,ಶಾಸಕರು ಸಹಿತ ರಾಜಕೀಯ ಮುಖಂಡರು,ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.ಮಾ. 21 ರಂದು ಮಗ್ರಿಬ್ ನಮಾಝ್ ನಂತರ ನೂರ್ ಎ ಅಜೇರ್ ವಳಿಯುದ್ದೀನ್ ಫೈಝೀ ರವರ ನೇತೃತ್ವದಲ್ಲಿ ನಡೆಯಲಿರುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಸೀದಿಯ ಪ್ತ.ಕಾರ್ಯದರ್ಶಿ ಶಿಹಾಬುದ್ದೀನ್,ಸದಸ್ಯರಾದ ಅಬ್ದುಲ್ ಹಕೀಂ, ಮಹಮ್ಮದ್ ಸಾಲಿ, ಆಚಾರಿಬೆಟ್ಟು ಬದ್ರಿಯಾ ಮಸೀದಿ ಮತ್ತು ಮದ್ರಸದ ಅಧ್ಯಕ್ಷ ಇದಾಯತ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

Leave a Comment