ಬಂಟ್ವಾಳ:ಕಳೆದ ಅವಧಿಯಲ್ಲಿ ರಾಜಕೀಯ ಪ್ರಬುದ್ಧತೆ ಇಲ್ಲದೆ ಕಾಂಗ್ರೆಸ್ ಜೊತೆ ತಪ್ಪಾಗಿ ಒಳ ಒಪ್ಪಂದ ಮಾಡಿಕೊಂಡು ನಾಮಪತ್ರ ಹಿಂಪಡೆದು ನಾವು ಕೈಸುಟ್ಟುಕೊಂಡಿದ್ದೇವೆ.ಈಗಾಗಲೇ ಜಿಲ್ಲೆಯ ಎಲ್ಲಾ ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಕ್ಷೇತ್ರದಲ್ಲಿ ತ್ರಿಕೋಣ ಸ್ಪಧರ್ೆ ಮೂಲಕ ಗೆಲ್ಲುವ ನಿರೀಕ್ಷೆ ಇದೆ ಎಂದು ಎಸ್ ಡಿ ಪಿ ಐ ಅಭ್ಯರ್ಥಿ ಇಲ್ಯಾಸ್ ತುಂಬೆ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಂಟ್ವಾಳದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಮಧ್ಯವತರ್ಿಗಳ ಹಾವಳಿ ಜೋರಾಗಿದೆ. ಅಕ್ರಮ -ಸಕ್ರಮ ದಂಧೆಗೆ ಮಣಿಯದ ತಹಶೀಲ್ದಾರ್ ವರ್ಗಾವಣೆಗೊಂಡಿದ್ದು, ಭ್ರಷ್ಟಾಚಾರ ಮತ್ತು ಲಂಚಾವತಾರ ಮಿತಿ ಮೀರಿದೆ. ಹಲವು ವರ್ಷಗಳಿಂದ 94ಸಿ ಯೋಜನೆಯಡಿ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಪಹಣಿಪತ್ರ ಮತ್ತಿತರ ದಾಖಲೆಪತ್ರ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಪ್ರಿಂ ಕೋರ್ಟ್ ನಿಯಮಾವಳಿ ಮತ್ತಿತರ ಶರ್ತಗಳನ್ನು ಉಲ್ಲಂಘಿಸಿ ರೌಡಿಗಳ ಮೂಲಕ ಟೋಲ್ ಸಂಗ್ರಹ ಮಾಡುತ್ತಿದ್ದಾರೆ.
ಸ್ಥಳೀಯ ಐದು ಕಿ.ಮೀ.ವ್ಯಾಪ್ತಿಯ ಶಾಲಾ ಕಾಲೇಜಿನ ಬಸ್ ಸೇರಿದಂತೆ ವಾಹನ ಸವಾರರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಪಾಸ್ ಪಡೆಯಲು ಶಾಸಕರಿಂದ ಶಿಫಾರಸ್ಸು ಬೇಕು ಎನ್ನುತ್ತಾ ಕೋರ್ಟ್ ನೀಡಿದ ಎಲ್ಲಾ ಶರ್ತ ಉಲ್ಲಂಘಿಸಿದ್ದಾರೆ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಈ ಟೋಲ್ ಕೇಂದ್ರದಲ್ಲಿ ವಾಹನ ಶೆಲ್ಟರ್, ಶೌಚಾಲಯ, ಸುಸಜ್ಜಿತ ಅಂಬುಲೆನ್ಸ್ ಇಲ್ಲ. ಸೂಕ್ತ ಸರ್ವಿಸ್ ರಸ್ತೆ, ಕುಡಿಯುವ ನೀರು, ಕ್ಯಾಂಟೀನ್ ಇಲ್ಲ. ಅಲ್ಲಿನ ಸಿಬ್ಬಂದಿಗಳು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುನೀಶ್ ಆಲಿ, ಶಾಹುಲ್ ಹಮೀದ್, ಶರೀಫ್ ಇದ್ದರು.














