Coastal Bulletin

ಬಂಟ್ವಾಳ :ಸರ್ಕಾರದ ಸೂಚನೆಯಂತೆ ಬಂಟ್ವಾಳ ತಹಶೀಲ್ದಾರ್ ಅವರ ಗ್ರಾಮವಾಸ್ತವ್ಯ ಕಾರ್ಯಕ್ರಮ ಅಮ್ಮುಂಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆಯಿತು.ತಹಶೀಲ್ದಾರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಮನ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ತಹಸೀಲ್ದಾರ್ ಕವಿತಾ ಕಾರ್ಯಕ್ರಮ ಉದ್ಘಾಟಿಸಿದರು.ಅರ್ಹ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸವಲತ್ತು ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಕಾರ್ತಿಕ್ ಬಲ್ಲಾಳ್, ರಾಧಾಕೃಷ್ಣ ತಂತ್ರಿ, ರವೀಂದ್ರ ಸುವರ್ಣ, ರೋನಾಲ್ಡ್ ಡಿ'ಸೋಜ, ಲೀಲಾವತಿ, ಭಾಗೀರಥಿ, ಪೌಝಿಯಾ, ಲೀಲಾವತಿ, ಲಕ್ಷ್ಮೀ, ಟಿ.ಎಚ್.ಅಬ್ದುಲ್ ರಝಾಕ್, ನೆಫೀಸಾ, ಸವರ್ೆ ಇಲಾಖೆ ಅಧಿಕಾರಿ ರೇಣುಕಾ ನಾಯಕ್ , ಉಪತಹಶೀಲ್ದಾರ್ ನರೇಂದ್ರ ನಾಥ್ ಭಟ್ ಮಿತ್ತೂರು, ಪ್ರಭಾರ ಕಂದಾಯ ನಿರೀಕ್ಷಕ ಧರ್ಮಸಾಮ್ರಾಜ್ಯ, ಸಿಬ್ಬಂದಿ ಗ್ರೆಟ್ಟಾ, ಅಮ್ಮುಂಜೆ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್ ಇದ್ದರು. ಗ್ರಾಮಕರಣಿಕ ಜಗದೀಶ ಶೆಟ್ಟಿ

ಸ್ವಾಗತಿಸಿ, ಉಪತಹಶೀಲ್ದಾರ್ ದಿವಾಕರ ಮುಗುಳ್ಯ ವಂದಿಸಿದರು. ಉಪತಹಶೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.

ಮಹಿಳೆ ಕಣ್ಣೀರು: ಕಳೆದ 20 ವರ್ಷಗಳಿಂದ ಮನೆ ನಂಬರ್ ನೀಡುತ್ತಿಲ್ಲ ಎಂದು ಸದಾಶಿವ ಅಮ್ಮುಂಜೆ ದೂರಿಕೊಂಡರು. ಸ್ಥಳೀಯ ವ್ಯಕ್ತಿಯೊಬ್ಬರು ಅಕ್ರಮವಾಗಿ ಮಣ್ಣು ಅಗೆದ ಕಾರಣ ನಮ್ಮ ಮನೆ ಬೀಳುವ ಸ್ಥಿತಿಯಲ್ಲಿದೆ. ನಮಗೆ ರಕ್ಷಣೆ ಕೊಡಿ ಎಂದು ಕರುಣಾಕರ ಮೂಲ್ಯ ಎಂಬವರ ಪತ್ನಿ ಕಣ್ಣೀರು ಹಾಕಿದರು. ಬಿಸಿರೋಡು- ಅಮ್ಮುಂಜೆ - ಪೊಳಲಿ ಸಂಪರ್ಕಕ್ಕೆ ಸರ್ಕಾರಿ ಬಸ್ ಒದಗಿಸಬೇಕು. ಕರಿಂಯಂಗಳ ಗ್ರಾಮ ಕರಣಿಕರ ಕಚೇರಿಯನ್ನು ಅಮ್ಮುಂಜೆಗೆ ಸ್ಥಳಾಂತರಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬೂಬಕ್ಕರ್ ಅಮ್ಮುಂಜೆ ಆಗ್ರಹಿಸಿದರು. 

Leave a Comment