ಐಪಿಎಲ್ : ಕೊಲ್ಕತ್ತಾ ವನ್ನು ಮಣಿಸಿ 4ನೇ ಬಾರಿ ಕಿರೀಟ ಮುಡಿಗೇರಿಸಿದ ಚೆನ್ನೈ ಸೂಪರ್ ಕಿಂಗ್ಸ್

Coastal Bulletin
ಐಪಿಎಲ್ : ಕೊಲ್ಕತ್ತಾ ವನ್ನು ಮಣಿಸಿ 4ನೇ ಬಾರಿ ಕಿರೀಟ ಮುಡಿಗೇರಿಸಿದ ಚೆನ್ನೈ ಸೂಪರ್ ಕಿಂಗ್ಸ್

ದುಬೈ : ಬಹಳ ನಿರೀಕ್ಷಿತ ಕುತೂಹಲಕಾರಿ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ತಂಡವನ್ನು ಸೋಲಿಸಿ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು 192 ರನ್ನುಗಳನ್ನು ಗಳಿಸಿತು. ಚೆನ್ನೈ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಡುಪ್ಲೆಸಿಸ್ 86 ರನ್‌ಗಳನ್ನು ಗಳಿಸಿದರು. ಗಾಯಕ್ ವಾಡ್ , ಉತ್ತಪ್ಪ ಹಾಗೂ ಮೊಯಿನ್ ಅಲಿ ಅತ್ಯಮೂಲ್ಯ ವಾದ ರನ್‌ಗಳನ್ನು ಕಲೆ ಹಾಕಿದರು.

ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಕೊಲ್ಕತ್ತಾ 9 ವಿಕೆಟ್‍ಗಳನ್ನು ಕಳೆದುಕೊಂಡು 165 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು.


ಕೊಲ್ಕತ್ತಾ ಪರ ಆರಂಭಿಕ ಆಟಗಾರರಾದ ಗಿಲ್ (51) ಹಾಗೂ ಐಯರ್ (50)  ಉತ್ತಮ ಅಡಿಪಾಯ ನೀಡಿದರೂ ನಂತರ ಯಾವುದೇ ಬ್ಯಾಟ್ಸ್‌ಮನ್‌ ಉತ್ತಮ ರನ್ ಕಲೆಹಾಕುವಲ್ಲಿ ವಿಫಲರಾದರು.

Leave a Comment