Coastal Bulletin

ಬಂಟ್ವಾಳ :ದ.ಕ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ಇದರ ವತಿಯಿಂದ ಬಂಟ್ವಾಳ ತಾಲೂಕಿನ ಅರಳ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಗಿದೆ.

ಗ್ರಾ. ಪಂ ಅಧ್ಯಕ್ಷರಾದ ಲಕ್ಷ್ಮೀಧರ ಶೆಟ್ಟಿ ಉಪಾಧ್ಯಕ್ಷರಾದ ಪ್ರೇಮ ,ಪಂ. ಅ. ಅಧಿಕಾರಿ ಧರ್ಮರಾಜ್ˌˌ ಪಂಚಾಯತ್ ಸದಸ್ಯರುˌ ಪಂಪು ಚಾಲಕರುˌ ಪಂಚಾಯತ್ ಸಿಬ್ಬಂದಿಗಳುˌ ಆಶಾ ˌ ಅಂಗನವಾಡಿ ಕಾರ್ಯಕರ್ತೆಯರುˌ ಆರೋಗ್ಯ ಸಹಾಯಕಿಯರು ˌ ಗ್ರಾಮಸ್ಥರು ಹಾಗೂ ಫಲಾನುಭವಿಗಳ ಸಮ್ಮುಖದಲ್ಲಿ ಅರಳ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವೆಂದು ಘೋಷಣೆ ಮಾಡಲಾಯಿತು.

ಪಂಚಾಯತ್ ಅಧ್ಯಕ್ಷರು ಮಾತನಾಡಿ ಜಲಜೀವನ್ ಮಿಷನ್ ನ ಅನುಷ್ಠಾನ ಯಶಸ್ವಿಯಾಗಿದೆ . ಸರ್ಕಾರದ ಈ

ಯೋಜನೆ ಗ್ರಾಮದ ಪ್ರತಿಯೋಬ್ಬರಿಗೂ ಶುದ್ಧ ಮತ್ತು ಸುರಕ್ಷಿತ ನೀರು ಒದಗಿಸಿ ಕೊಡಲು ಸಹಕಾರಿಯಾಗಿದೆ. ಆದುದರಿಂದ ಅರಳ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಲು ಸಂತೋಷವಾಗುತ್ತದೆ ಎಂದು ತಿಳಿಸಿದರು.

ಬಂಟ್ವಾಳ ಕು. ನೀ. ಮತ್ತು ನೈ. ಇಲಾಖೆಯ ಸಹಾಯಕ ಅಭಿಯಂತರರು ಅಜಿತ್ˌ ಇಂಜಿನಿಂಯರ್ ನಾಸಿರ್ˌಅನುಷ್ಠಾನ ಬೆಂಬಲ ಸಂಸ್ಥೆಯ ಚರಣ್ ರಾಜ್ˌ ಅನುಷ್ಠಾನ ಬೆಂಬಲ ಸಂಸ್ಠೆ - 2ನ ಸಿಬ್ಬಂದಿಗಳು ಉಪಸ್ಠಿತರಿದ್ದರು. ಪಂ ಅ. ಅಧಿಕಾರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment