Coastal Bulletin

ಬಂಟ್ವಾಳ :ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಹಲವೆಡೆ ಮನೆಗಳಿಗೆ ಹಾನಿ ಉಂಟಾಗಿದೆ. ಗುರುವಾರ ಬೆಳಿಗ್ಗೆ ನೇತ್ರಾವತಿ ನದಿ ನೀರಿನ ಮಟ್ಟ 6.4 ಮೀಟರ್ ದಾಟಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿದೆ.

ಪೆರಾಜೆ ಗ್ರಾಮದ ಏನಾಜೆ ಎಂಬಲ್ಲಿ ಕಾಂತಪ್ಪ ಕುಲಾಲ್ ಅವರ ಮನೆ ಹಾನಿಗೀಡಾಗಿದ್ದು, ನಾವೂರು ಗ್ರಾಮದ ಸೆಬಾಸ್ಟಿಯನ್ ಆಲ್ಪುಕರ್ಕ್ ಎಂಬವರ ಮನೆ ಕುಸಿದು ಬಿದ್ದಿದೆ. ವಿಟ್ಲ ಕಸ್ಬಾ ಗ್ರಾಮದ ಒಕ್ಕೆತ್ತೂರು ಎಂಬಲ್ಲಿ ಮಹಮ್ಮದ್ ಎಂಬವರ ಮನೆ ಸಹಿತ ಬಾಳೆಪುಣಿ ಗ್ರಾಮದಲ್ಲಿ ವಿಶ್ವನಾಥ ಎಂಬವರ ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ವಿಟ್ಲ ಕಸಬಾ ವಿ.ಕೆ.ಅಬ್ಬಾಸ್ ಎಂಬವರ ಮನೆಗೆ ಹಾನಿಯಾಗಿದ್ದು, 

ಶಂಬೂರು ಇರಂತಬೆಟ್ಟು

ಎಂಬಲ್ಲಿ ಕೃತಕ ನೆರೆಗೆ ಶೀನ ಶೆಟ್ಟಿ ಅವರ ತೋಟಕ್ಕೆ ನೀರು ನುಗ್ಗಿದೆ. ಸುಜೀರ್ ಕೊಡಂಗೆ ಲಕ್ಷ್ಮಣ ಪೂಜಾರಿ ಅವರ ಮನೆಗೆ ಧರೆ ಜರಿದು ಹಾನಿಯಾಗಿದೆ. ಬಿ.ಸಿ.ರೋಡಿನ ಪೊನ್ನೋಡಿ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರ ತೆರವುಗೊಳಿಸಲಾಯಿತು. ಕೆಲವೆಡೆ ಗುಡ್ಡ ಕುಸಿದಿದ್ದರೆ, ಕೆಲವೆಡೆ ಮರ ಉರುಳಿ ಬಿದ್ದು ವಿದ್ಯುತ್ಕಂಬಗಳು ಕೂಡಾ ಧರಾಶಾಹಿಯಾಗಿದೆ ಎಂದು ತಿಳಿದು ಬಂದಿದೆ.

Leave a Comment