Coastal Bulletin

ಮಂಗಳೂರಿನ ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಜಿ. ಶ್ರೀಧರ್ ಮನೆ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದೆ.

ಶ್ರೀಧರ್ ಗೆ ಸೇರಿದ ಮಂಗಳೂರಿನಲ್ಲಿರುವ ಮನೆ,ಕಛೇರಿ,ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿರುವ ತಂದೆಯ ಮನೆ,ಮೈಸೂರಿನಲ್ಲಿರುವ ಸ್ವಂತ ಮನೆ ಸೇರಿ ವಿವಿಧ ಕಡೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ 13 ಲಕ್ಷ ಮೌಲ್ಯದ 920 ಗ್ರಾಂ

ಚಿನ್ನ, 90 ಸಾವಿರ ಮೌಲ್ಯದ 3.5 ಕೇಜಿ ಬೆಳ್ಳಿ, ಒಂದು ಬೆಲೆನೋ ಕಾರು, ಒಂದು ಬುಲೆಟ್ ಬೈಕ್ ಹಾಗು ಬೆಂಗಳೂರು, ಹಾಸನದ ಬೇಲೂರು, ಮೈಸೂರಿನಲ್ಲಿ 30/40 ಸೈಟಿನ ಜಾಗ ಹೊಂದಿರುವ ದಾಖಲೆ ಪತ್ರಗಳನ್ನು ಪತ್ತೆಮಾಡಿದ್ದಾರೆ.

Leave a Comment