ಬಡಕಬೈಲ್: ಸಂತ ಡೊಮಿನಿಕ್ ಸಿಬಿಎಸ್ಸಿ ಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ. 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು, ಸೋನಾಲ್ ವೈ.ವಿ ಶೇ.96.4 ಅಂಕ.

Coastal Bulletin
ಬಡಕಬೈಲ್: ಸಂತ ಡೊಮಿನಿಕ್ ಸಿಬಿಎಸ್ಸಿ ಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ. 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು, ಸೋನಾಲ್ ವೈ.ವಿ ಶೇ.96.4 ಅಂಕ.

ಬಂಟ್ವಾಳ: ತಾಲೂಕಿನ ಬಡಕಬೈಲ್- ಮರಿಯಾಶ್ರಮದಲ್ಲಿರುವ ಸಂತ ಡೊಮಿನಿಕ್ ಸಿಬಿಎಸ್ಸಿ ಶಾಲೆಯು ಎಂದಿನಂತೆ ಈ ಬಾರಿಯೂ ಕೂಡ ಶೇಕಡ 100 ಫಲಿತಾಂಶವನ್ನು ದಾಖಲಿಸಿದೆ.

2025-26 ರ SSLC ಪರೀಕ್ಷೆಯಲ್ಲಿ ಡೊಮಿನಿಕ್ ಶಾಲೆಯ ವಿದ್ಯಾರ್ಥಿಗಳು ಶೇಕಡ 100 ಫಲಿತಾಂಶವನ್ನು ದಾಖಲಿಸುವುದರೊಂದಿಗೆ ಸಂಸ್ಥೆಗೆ ಹೆಮ್ಮೆ ತಂದಿರುತ್ತಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 92 ವಿದ್ಯಾರ್ಥಿಗಳಲ್ಲಿ 58 ವಿದ್ಯಾರ್ಥಿಗಳು - ವಿಶಿಷ್ಟ ಶ್ರೇಣಿಯಲ್ಲಿ, 31 ವಿದ್ಯಾರ್ಥಿಗಳು-  ಪ್ರಥಮ ದರ್ಜೆಯಲ್ಲಿ, 3 ವಿದ್ಯಾರ್ಥಿಗಳು - ದ್ವಿತೀಯ ದರ್ಜೆಯಲ್ಲಿ ತೇರ್ಗಡೆ

ಹೊಂದಿರುತ್ತಾರೆ.

ಸೋನಾಲ್ ವೈ.ವಿ -96.4%, ಜೆನಿಲಿಯ ರೀವ ಡಿಸೋಜಾ -95.2% , ಅನ್ಶಿಕ ಎಸ್.ಆರ್ -95% ಅಂಕಗಳನ್ನು ಗಳಿಸಿ ಮುಂಚೂಣಿಯಲ್ಲಿದ್ದಾರೆ. ವಿದ್ಯಾರ್ಥಿಗಳ ಗಮನಾರ್ಹ ಸಾಧನೆ ಯ ಬಗ್ಗೆ ಶಾಲಾ ಆಡಳಿತ ಮಂಡಳಿ, ಸಂಚಾಲಕರು, ಪ್ರಾಂಶುಪಾಲರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಅಭಿನಂದನೆ ತಿಳಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.

Leave a Comment