ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿ ನೇಮೋತ್ಸವದ ಪ್ರಯುಕ್ತ ಫೆ. 15ರಂದು ಮಂಗಳವಾರ ಸಂಜೆ 3. 30ಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಾಚೈತನ್ಯಾನಂದ ಅವರು ದೀಪ ಬೆಳಗಿಸಿ ಭವ್ಯ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಆಸ್ತಿಕ ಭಕ್ತರು ಪಾಲ್ಗೊಂಡು ಗಮನ ಸೆಳೆದರು. ವಿವಿಧ ಯುವಕ ಮತ್ತು ಮಹಿಳಾ ತಂಡಗಳ ಭಜನೆ, ಕುಣಿತ ಭಜನೆ,ಚೆಂಡೆ, ಬ್ಯಾಂಡು, ವಾಲಗ
ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.ನೀರಿಕ್ಷೆ ಮೀರಿ ಹೊರೆಕಾಣಿಕೆಯು ಹರಿದು ಬಂದಿದ್ದು,ಆಕರ್ಷಕ ಮೆರವಣಿಗೆಯು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಿಂದ ಹೊರಟು ಪುಂಚಮೆ ಮಾರ್ಗವಾಗಿ ದೈವಸ್ಥಾನಕ್ಕೆ ಆಗಮಿಸಿತು.














