ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ನಡೆಯಲಿರುವ "ಕಲಾವಳಿ-2024" ಕಾರ್ಯಕ್ರಮದ ಲಾಂಛನ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ದ ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವಾರ್ಷಿಕ ಮಹಾ ಸಭೆ ಕಾರ್ಯಕ್ರಮದಲ್ಲಿ ನಡೆಯಿತು.
ಜಿಲ್ಲಾ ಸಂಘದ ಅಧ್ಯಕ್ಷ ಶ್ರೀ ಮಯೂರ್ ಉಳ್ಳಾಲ್ ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳು ಲಾಂಛನ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ, ಉಪಾಧ್ಯಕ್ಷ ಸುಕುಮಾರ ಬಂಟ್ವಾಳ, ಕೋಶಾಧಿಕಾರಿ ರಮೇಶ್
ಸಾಲಿಯಾನ್ , ಸಮಿತಿ ಸದಸ್ಯರಾದ ಮಚೇಂದ್ರ ಸಾಲಿಯಾನ್, ಸುರೇಶ ಕುಲಾಲ್, ರಮೇಶ್ ಸಾಲಿಯಾನ್ ಸಂಚಯಗಿರಿ, ನಾರಾಯಣ ಸಿ ಪೆರ್ನೆ, ಆಶಾ , ಜಲಜಾಕ್ಷಿ ಕುಲಾಲ್ ಹಾಗೂ ಜಿಲ್ಲೆಯ ಪ್ರಮುಖ ಕುಲಾಲ ಸಂಘದ ಅಧ್ಯಕ್ಷರುಗಳು, ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.














