ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಇವರ ವತಿಯಿಂದ “ ವರ್ಣಾಂಜಲಿ" ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಡಿ.: 24ರಂದು ರವಿವಾರ ಸೇವಾಂಜಲಿ ಸಭಾಗೃಹದಲ್ಲಿ ಬೆಳಿಗ್ಗೆ 9.30ಯಿಂದ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಏರ್ಯ ಬಾಲಕೃಷ್ಣ ಹೆಗ್ಡೆ, ಏರ್ಯ ಆಳ್ವ ಪೌಂಡೇಷನ್ ಇವರು ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಬಿ. ರಾಮಚಂದ್ರ ರಾವ್, ನಿವೃತ್ತ ಶಿಕ್ಷಕರು, ಬಿ.ಸಿ.ರೋಡು ಹಾಗೂ ಕೆ. ಜಿ. ವಿಠಲ ಆಳ್ವ, ಕಿರಣ್ ಕೆಟರರ್ಸ್, ಫರಂಗಿಪೇಟೆ ಇವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಗಂಟೆ 2-30ಗೆ ಬಹುಮಾನ ವಿತರಣ ಕಾರ್ಯಕ್ರಮ ನಡೆಯಲಿದೆ.
ಸ್ಪರ್ಧಾ ವಿಭಾಗ:
1ರಿಂದ 4ನೇ ತರಗತಿ
ವಿಷಯ : ಸುಂದರ ಪರಿಸರ
ಬಹುಮಾನಗಳು :
ಪ್ರಥಮ : ರೂ. 1000/- ನಗದು ಮತ್ತು ಪ್ರಶಸ್ತಿ
ದ್ವಿತೀಯ : ರೂ. 750/- ನಗದು ಮತ್ತು ಪ್ರಶಸ್ತಿ
ತೃತೀಯ : ರೂ. 500/- ನಗದು ಮತ್ತು ಪ್ರಶಸ್ತಿ
5ರಿಂದ 7ನೇ ತರಗತಿ
ವಿಷಯ : ಹಳ್ಳಿಯ ಜೀವನ
ಬಹುಮಾನಗಳು
ಪ್ರಥಮ : ರೂ. 1500/- ನಗದು ಮತ್ತು ಪ್ರಶಸ್ತಿ
ದ್ವಿತೀಯ : ರೂ. 1000/- ನಗದು ಮತ್ತು
ಪ್ರಶಸ್ತಿ
ತೃತೀಯ : ರೂ. 500/- ನಗದು ಮತ್ತು ಪ್ರಶಸ್ತಿ
8ರಿಂದ 10ನೇ ತರಗತಿ
ವಿಷಯ : ಸ್ವಚ್ಛ ಭಾರತ
ಬಹುಮಾನಗಳು
ಪ್ರಥಮ : ರೂ, 2000/- ನಗದು ಮತ್ತು ಪ್ರಶಸ್ತಿ
ದ್ವಿತೀಯ : ರೂ. 1500/- ನಗದು ಮತ್ತು ಪ್ರಶಸ್ತಿ
ತೃತೀಯ : ರೂ. 1000/- ನಗದು ಮತ್ತು ಪ್ರಶಸ್ತಿ
ಪ್ರತೀ ವಿಭಾಗದಲ್ಲಿ 2 ಸಮಾಧಾನಕರ ಬಹುಮಾನವಿದೆ. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು.
ಭಾಗವಹಿಸುವ ವಿದ್ಯಾರ್ಥಿಗಳು ಬೆಳಿಗ್ಗೆ ಗಂಟೆ 9-00ಕ್ಕೆ ಸರಿಯಾಗಿ ಹಾಜರಿರಬೇಕು
ಶಾಲಾ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು, (ಐಡಿ ಕಾರ್ಡ್) ಡ್ರಾಯಿಂಗ್ ಪೇಪರ್ ಹೊರತುಪಡಿಸಿ. ಇತರ ಪರಿಕರಗಳನ್ನು ಮಕ್ಕಳೇ ತರಬೇಕು.ಸ್ಪರ್ಧಾ ಸಮಯ : 2 ಗಂಟೆಗಳು,
ಸ್ಪರ್ಧಾಳುಗಳಿಗೆ ಉಪಾಹಾರ ಹಾಗೂ ಭೋಜನ ವ್ಯವಸ್ಥೆಯಿದೆ ಎಂದು ಸಂಘಟಕರಾದ ಕೃಷ್ಣ ಕುಮಾರ್ ಪೂಂಜ ಹಾಗೂ ಬಾಲಕೃಷ್ಣ ಶೆಟ್ಟಿ ಮಂಚಿ ಪ್ತಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ವಿವರ ಗಳಿಗೆ ಸಂಪರ್ಕ, 8660794681/9980548868/9449078117















