Coastal Bulletin

ಬಂಟ್ವಾಳ :ಸುಮಾರು ಏಳು ವರ್ಷಗಳಿಂದ ಕಳ್ಳಿಗೆ ನೆತ್ತರಕೆರೆ ದ.ಕ.ಜಿ ಪಂ.ಹಿ ಪ್ರಾ.ಶಾಲಾ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯವನ್ನು ನಿರ್ವಹಿಸಿ ಇದೀಗ ವರ್ಗಾವಣೆಗೊಂಡ ಮುಖ್ಯ ಶಿಕ್ಷಕಿಯಾದ ಗುಣರತ್ನರ ಬೀಳ್ಕೊಡುಗೆ ಸಮಾರಂಭವು ಮಂಗಳವಾರ ಕಳ್ಳಿಗೆ ಶಾಲೆಯಲ್ಲಿ ನಡೆಯಿತು.

ಶಾಲಾ ಹಳೇವಿದ್ಯಾರ್ಥಿ ಸಂಘ,ಶಾಲಾ ಎಸ್ ಡಿ ಎಂ ಸಿ ,ನವೋದಯ ಮಿತ್ರಕಲಾವ್ರಂದ ಮತ್ತು ನೇತ್ರಾವತಿ ಮಾತ್ರಮಂಡಳಿ ನೆತ್ತರಕೆರೆ ಹಾಗೂ ಪೋಷಕರ ಸಮ್ಮುಖದಲ್ಲಿ ಮುಖ್ಯ ಶಿಕ್ಷಕಿ ಗುಣರತ್ನ ರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿಎಸ್ ಡಿ ಎಂ ಸಿ ಅಧ್ಯಕ್ಷರಾದ ದಾಮೋದರ್ ನೆತ್ತರಕೆರೆ,ನಿಕಟಪೂರ್ವ ಅಧ್ಯಕ್ಷರಾದ ಭಾಸ್ಕರ ಕುಲಾಲ್,ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷರಾದ ಸುರೇಶ್ ಭಂಡಾರಿ ಅರ್ಬಿ,ಜಗದೀಶ ಬಂಗೇರ,ನೇತ್ರಾವತಿ ಮಾತೃ ಮಂಡಳಿಯ ಅಧ್ಯಕ್ಷರಾದ

ವಸಂತಿರಾಮಚಂದ್ರ,ಶೈಕ್ಷಣಿಕ ಸಮಿತಿಯ ಅಧ್ಯಕ್ಷರಾದ ಸುಬ್ರಮಣ್ಯ ರಾವ್,ಮುಖ್ಯಶಿಕ್ಷಕಿ ಭಾನುಮತಿರಾಜೀವಿ ಕಳ್ಳಿಗೆ ಪಂಚಾಯತ್ ಸದಸ್ಯರಾದ ರೇಷ್ಮಸತೀಶ್, ಪೋಷಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ,ಮುಖ್ಯಶಿಕ್ಷಕಿ ಭಾನುಮತಿ ರಾಜೀವಿ ಸ್ವಾಗತಿಸಿ, ಸಹಶಿಕ್ಷಕಿ ಜೆಸಿಂತಾ ರೊಡ್ರಿಗಸ್ ಸನ್ಮಾನಿತ ರನ್ನು ಪರಿಚಯಿಸಿ, ವಂದಿಸಿದರು. ಮೋಹಿನಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಮರಿಯ ಸೆಲಿನ್,ಅನಿತಾ ಸ್ಯಾಂಡ್ರ ಮೋನಿಸ್,ಸುಮಲತಾ, ಆಶಿಕ,ಪ್ರೀತ ಹಾಗೂ ಲಾಸ್ಯ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದರು.

Leave a Comment