Coastal Bulletin

ಸಾವಿರಾರು ಸಂಖ್ಯೆಯಲ್ಲಿ ಮಾತೆಯರು ಮಾತೃಸಮಾವೇಶದಲ್ಲಿ ಭಾಗವಹಿಸಿದ್ದೀರ.. ಒಂದು ರೀತಿಯಲ್ಲಿ ಬ್ರಹ್ಮಕಲಶದ ಕಳೆ ಇಂದೇ ಎದ್ದುಕಾಣುತ್ತಿದೆ. ತಾಯಂದಿರು ಧರ್ಮ ಪತಾಕೆಯನ್ನು ಎತ್ತಿಹಿಡಿಯುವ ಸನ್ನಿವೇಶ ನೋಡಲು ಎರಡು ಕಣ್ಣುಗಳು ಸಾಲದು. ನಾನು ಈ ಸಮಾವೇಶದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ. ಬ್ರಹ್ಮಕಲಶ ಪೂರ್ವಭಾವಿಯಾಗಿ ಮಾತೆಯರ ಸಭೆಯನ್ನು ಗಮನಿಸಿದಾಗ, ತಾಯಂದಿರ ಕಣ್ಣುಗಳಲ್ಲಿ ವಿಶೇಷ ಚೈತನ್ಯ ಕಂಡುಬರುತ್ತಿದೆ. ಮುಂದೆ ನಡೆಯಲಿರುವ ಬ್ರಹ್ಮಕಲಶ ಚರಿತ್ರೆಯಲ್ಲಿ ನಿಲ್ಲುವಂತಹ ಸನ್ನಿವೇಶ ಗೋಚರಿಸುತ್ತಿದೆ ಎಂದು ಮಹರ್ಷಿ ಆನಂದ ಗುರೂಜಿ ನುಡಿದರು.

ಅವರು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ ಪೂರ್ವಭಾವಿಯಾಗಿ ಭಾನುವಾರ ಮಹಿಳಾ ಸ್ವಯಂಸೇವಕರಿಗಾಗಿ ಆಯೋಜಿಸಿದ ಮಾತೃ ಸಮಾವೇಶದಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮುನ್ನ ದೇವಸ್ಥಾನಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದ ಅವರು, ಬ್ರಹ್ಮಕಲಶ ಪ್ರಯುಕ್ತ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯಗಳನ್ನು ಗಮನಿಸಿದರು. ಬಳಿಕ ಪ್ರಸಾದ ಸ್ವೀಕರಿಸಿ ಸಮಾವೇಶಕ್ಕೆ ಆಗಮಿಸಿದರು.

ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮುಂಡಾಜೆ, ಸಂಚಾಲಕ ತೇವು ತಾರನಾಥ ಕೊಟ್ಟಾರಿ,

ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಸದಸ್ಯರಾದ ಸತೀಶ್ ಶೆಟ್ಟಿ ಮೊಡಂಕಾಪು, ಕೇಶವ ದೈಪಲ, ದಿವಾಕರ ಶೆಟ್ಟಿ ಕುಪ್ಪಿಲ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಅಮಿತಾ ವಿಶ್ವನಾಥ್ ದಾಸರಕೋಡಿ, ಉಮಾ ಲಿಂಗಪ್ಪ ತುಂಬೆ, ಪ್ರಮುಖರಾದ ರೇಣುಕಾ ದಿವಾಕರ ಪಂಬದಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ

 ಆರಂಭದಲ್ಲಿ ಪ್ರಸಾದ್ ಕುಮಾರ್ ಬಿಸಿರೋಡು ಭಾರತ ಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಹುತಾತ್ಮ ವೀರಯೋಧರ ಸಾಹಸಗಾತೆಯನ್ನು ಪರಿಚಯಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Leave a Comment