ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ).ಪ್ರಗತಿಬಂದು ಸ್ವ -ಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯ ಬಂಟ್ವಾಳ ತಾಲೂಕು ಇದರ ಪ್ರಗತಿಬಂದು ಸ್ವ - ಸಹಾಯ ಸಂಘಗಳ ಸಾಧನಾ ಸಮಾವೇಶ ಫೆ.13ರಂದು ಸೋಮವಾರ ಸೇವಾಂಜಲಿ ಸಭಾಂಗಣ ಫರಂಗಿಪೇಟೆಯಲ್ಲಿ ಯೋಜನೆಯ ತುಂಬೆ ವಲಯ ಅಧ್ಯಕ್ಷರಾದ ಲೀಡಿಯಾ ಪಿಂಟೋ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೋಜನೆಯ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್, ಗ್ರಾಮ ಅಭಿವೃದ್ಧಿ ಯೋಜನೆ ಪ್ರತಿಯೊಬ್ಬರ ವಿಶ್ವಾಸದಿಂದ ನಡೆಯುತ್ತಿದೆ.ಪೂಜ್ಯ ವೀರೇಂದ್ರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸಾಗುತಿದೆ. ಅಭಿವೃದ್ಧಿಗಾಗಿ ಸಂಘ ವಿನಃ ಸಾಲಕ್ಕಾಗಿ ಅಲ್ಲ ಎಂದರು.
ಕಾರ್ಯಕ್ರಮದಲ್ಲಿ ತುಂಬೆ ವಲಯಕ್ಕೆ ಸಂಬಂಧಪಟ್ಟ 7 ಒಕ್ಕೂಟಗಳ ಉತ್ತಮ ತಂಡಗಳನ್ನು ಗುರುತಿಸಿ ಸನ್ಮಾನಿಸಲಾಯಿತು, ಹಾಗೂ ಸಾಧಕ ಸದಸ್ಯರನ್ನು ಗೌರವಿಸಲಾಯಿತು.ಹಾಗೂ ಯೋಜನೆಯ ಸಂಪೂರ್ಣ ಸುರಕ್ಷಾ ಸೌಲಭ್ಯದ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸೇವಾಂಜಲಿ ಆಡಳಿತ ಟ್ರಸ್ಟಿ ಕೆ ಕೃಷ್ಣಕುಮಾರ್ ಪೂಂಜ, ಯೋಜನೆಯ ಜಿಲ್ಲಾನಿರ್ದೇಶಕರಾದ ಸತೀಶ್ ಶೆಟ್ಟಿ,ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮ್ಲಾನ್, ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು
ಸದಸ್ಯ ಐತಪ್ಪ ಅಳ್ವ ಸುಜೀರ್ ಗುತ್ತು, ಜ್ಯೋತಿಷಿ ಅನಿಲ್ ಪಂಡಿತ್ ಬ್ರಹ್ಮರ ಕೋಟ್ಲು, ಸಮಾಜ ಸೇವಕಿ ವಸಂತಿ ಲೋಕನಾಥ್ ಶೆಟ್ಟಿ, ಪಾರ್ಲಿಯಾ, ಕಳ್ಳಿಗೆ ಒಕ್ಕೂಟ ಅಧ್ಯಕ್ಷ ಜಯಂತ್, ನರಿಕೊಂಬು ಎ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪಸಪಲ್ಯ , ನಂದಾವರ ಒಕ್ಕೂಟ ಅಧ್ಯಕ್ಷ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿಗಳಾದ ಬಬಿತಾ, ಅಮಿತಾ, ವನಿತಾ ಪ್ರಾರ್ಥಿಸಿ, ನರಿಕೊಂಬು ಎ ಒಕ್ಕೂಟ ಸೇವಾ ಪ್ರತಿನಿಧಿ ಕುಸುಮಾವತಿ ಸ್ವಾಗತಿಸಿ, ಪ್ರತಿನಿಧಿ ಅಮಿತಾ ಸಾಧನ. ವರದಿ ವಾಚಿಸಿದರು. ಒಕ್ಕೂಟದ ಅಧ್ಯಕ್ಷ ಸುಕೇಶ್ ಶೆಟ್ಟಿ ಧನ್ಯವಾದವಿತ್ತರು.ತುಂಬೆ ವಲಯ ಮೇಲ್ವಿಚಾರಕಿ ಮಮತ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು ಸೇವಾಪ್ರತಿನಿಧಿಗಳಾದ ಪ್ರತಿಭಾ, ಮಲ್ಲಿಕಾ, ಅನಿತಾ, ಸಹಕರಿಸಿದರು.














