ಇಂದು ಭಾರತ -ಪಾಕ್ ಹೈ ವೋಲ್ಟೇಜ್ ವಿಶ್ವಕಪ್ ಕ್ರಿಕೆಟ್ ಪಂದ್ಯ: ಸೋಲರಿಯದ ಭಾರತಕ್ಕೆ ಮೋದಿ ಅಂಗಳದಲ್ಲಿ ಹ್ಯಾಟ್ರಿಕ್ ಜಯದ ಕನಸು.

Coastal Bulletin
ಇಂದು ಭಾರತ -ಪಾಕ್ ಹೈ ವೋಲ್ಟೇಜ್ ವಿಶ್ವಕಪ್ ಕ್ರಿಕೆಟ್ ಪಂದ್ಯ: ಸೋಲರಿಯದ ಭಾರತಕ್ಕೆ ಮೋದಿ ಅಂಗಳದಲ್ಲಿ ಹ್ಯಾಟ್ರಿಕ್ ಜಯದ ಕನಸು.

ಕ್ರಿಕೆಟ್ ಪ್ರೇಮಿಗಳ ಅದೆಷ್ಟೋ ಸಮಯದಿಂದ ಬಹಳ ನಿರೀಕ್ಷೆಯಿಂದ ಕಾಯುತ್ತಾ ಇದ್ದ ವಿಶ್ವಕಪ್ ಭಾರತ ಪಾಕಿಸ್ತಾನ ಮುಖಮುಖ ಇಂದು ಮಧ್ಯಾಹ್ನ 2:00ರಿಂದ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಆಹ್ಮದಾಬಾದ್ ನರೇಂದ್ರ ಮೋದಿ ಅಂಗಳದಲ್ಲಿ ಸುಮಾರು 1,32,000 ವೀಕ್ಷಕರ ಸಮ್ಮುಖದಲ್ಲಿ ನಡೆಯಲಿದೆ.

ಇತಿಹಾಸದತ್ತ ಕಣ್ಣು ಹಾಯಿಸಿದರೆ ಏಕದಿನ ವಿಶ್ವಕಪ್ ಈವರೆಗೆ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದದ್ದೇ ಇಲ್ಲ. 1992 ರಿಂದ 2019 ರವರೆಗೆ ನಡೆದ ಎಲ್ಲಾ 7 ಪಂದ್ಯಗಳಲ್ಲೂ ಟೀಮ್ ಇಂಡಿಯ ಜಯಭೇರಿ ಮೊಳಗಿಸಿ ಅಜೇಯ ಸಾಧನೆ ಮಾಡಿದೆ.ಕಳೆದ 31ವರ್ಷಗಳಿಂದಲೂ ಪಾಕ್ ಮೊದಲ ಗೆಲುವಿನ

ನೀರಿಕ್ಷೆಯಲ್ಲೇ ಇದೆ.

ಈ ವಿಶ್ವಕಪ್ ನಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಹ್ಯಾಟ್ರಿಕ್ ಜಯದ ಕನಸು ಕಾಣುತ್ತಿದ್ದೆ, ಬ್ಯಾಟಿಂಗ್ ಗೆ ಹೆಚ್ಚಿನ ನೆರವು ನೀಡುವ ಆಹ್ಮದಾಬಾದ್ ಟ್ರ್ಯಾಕ್ ಮುನ್ನೂರಕ್ಕಿಂತ ಹೆಚ್ಚು ರನ್ ಗಳಿಸಿದರೆ ಜಯ ಸುಲಭವಾಗಲಿದೆ. ಭಾರತಕ್ಕೆ ಈ ಅವಕಾಶ ಸಿಗುವಂತಾಗಲಿ.

Leave a Comment