ಅಂಬಿಕಾಪತಿ ಮನೆಯಲ್ಲಿ 42 ಕೋಟಿಯಷ್ಟು ದೊರೆತ ಅಕ್ರಮ ಹಣದ ಮೂಲ ಕಾಂಗ್ರೆಸ್ ಪಕ್ಷ ಪಂಚರಾಜ್ಯ ಚುನಾವಣೆಗೆ ಕಮಿಷನ್ ರೂಪದಲ್ಲಿ ಸಂಗ್ರಹಿಸಲಾಗಿದೆ- ಬಿಜೆಪಿ ಗಂಭೀರ ಆರೋಪ.

Coastal Bulletin
ಅಂಬಿಕಾಪತಿ ಮನೆಯಲ್ಲಿ 42 ಕೋಟಿಯಷ್ಟು ದೊರೆತ ಅಕ್ರಮ ಹಣದ ಮೂಲ ಕಾಂಗ್ರೆಸ್ ಪಕ್ಷ ಪಂಚರಾಜ್ಯ ಚುನಾವಣೆಗೆ ಕಮಿಷನ್ ರೂಪದಲ್ಲಿ ಸಂಗ್ರಹಿಸಲಾಗಿದೆ- ಬಿಜೆಪಿ ಗಂಭೀರ ಆರೋಪ.

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದೆರಡು ದಿನಗಳಿಂದ ಕಾಂಗ್ರೆಸ್‌ ಏಜೆಂಟ್‌ ಎಂದು ಹೇಳಲಾಗುವ ಮಾಜಿ ಕಾರ್ಪೋರೇಟರ್‌ ಅಶ್ವತ್ಥಮ್ಮ ಹಾಗೂ ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಯ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸುತ್ತಿದ್ದು 42 ಕೋಟಿ ರೂ. ಒಂದೇ ಕಡೆ ಸಿಕ್ಕಿದೆ. ಈ ಹಣದ ಮೂಲವು ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಸಂಗ್ರಹಿಸಿದ ಹಣ ಎಂದು ಬಿಜೆಪಿ ಆರೋಪಿಸಿದೆ.

 ಬಿಬಿಎಂಪಿ ಬಿಡುಗಡೆ ಮಾಡಿರುವ 650 ಕೋಟಿ ಅನುದಾನ ಪಡೆದಿರುವ ಗುತ್ತಿಗೆದಾರರು ಯಾರು? ಅವರ ಹಿನ್ನಲೆ ಏನು? ಬಾಕಿ ಬಿಲ್ಲುಗಳ ವಿವರ, 50 ಕೋಟಿ ರೂಗಳಿಗೆ ಎಷ್ಟು

ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿತ್ತು? ಈ ಹಣ ತಮಿಳುನಾಡಿನಿಂದ ತೆಲಂಗಾಣಕ್ಕೆ ಕಳುಹಿಸಲು ಯಾಕೆ ಯೋಜನೆ ಮಾಡಲಾಗಿತ್ತು? ತೆಲಂಗಾಣಕ್ಕೆ ಕಳುಹಿಸುವುದಾದರೆ ಚುನಾವಣೆಗಾಗಿ ಅಲ್ಲವೇ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

Leave a Comment