Coastal Bulletin

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ಇದರ ವತಿಯಿಂದ ಚೆನೈತ್ತೋಡಿ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಗಿದೆ.

ಜಲ ಜೀವನ್ ಮಿಷನ್ ಆಶಯದಂತೆ ಎಲ್ಲಾ ಮನೆಗಳಿಗೂ ನಳ್ಳಿ ಸಂಪರ್ಕ ಕಲ್ಪಿಸಲಾಗಿದ್ದು ಈಗ ಪಂಚಾಯತ್ ತನ್ನ ಗುರಿ ಮುಟ್ಟಿದೆ. ಸೆಪ್ಟೆಂಬರ್ 13 ರಂದು ಮಂಗಳವಾರ ಚೆನೈತ್ತೋಡಿ ಗ್ರಾಮ ಪಂಚಾಯತ್ ನಲ್ಲಿ ಹರ್ ಘರ್ ಜಲ್ ಘೋಷಣೆ ಕಾರ್ಯಕ್ರಮ ನಡೆಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ರಾಜೇಂದ್ರ ˌ ಪಂ. ಅ. ಅಧಿಕಾರಿ ಶ್ರೀ ರಾಜಶೇಖರ ರೈ ˌ ಶಿಶು ಅಭಿವೃದ್ಧಿ ಅಧಿಕಾರಿಯವರುˌˌಪಂಚಾಯತ್ ಸದಸ್ಯರುˌ ಪಂಪು ಚಾಲಕರುˌ ಪಂಚಾಯತ್ ಸಿಬ್ಬಂದಿಗಳುˌ ಆಶಾ ಕಾರ್ಯಕರ್ತೆಯರುˌ ಆರೋಗ್ಯ ಸಹಾಯಕಿಯರು ˌ ಗ್ರಾಮಸ್ಥರು ಹಾಗೂ ಫಲಾನುಭವಿಗಳ ಸಮ್ಮುಖದಲ್ಲಿ ಚೆನೈತ್ತೋಡಿˌ ಅಜ್ಜಿಬೆಟ್ಟುˌ ಕುಡಂಬೆಟ್ಟು ಈ ಮೂರು ಗ್ರಾಮಗಳನ್ನು

ಹರ್ ಘರ್ ಜಲ್ ಗ್ರಾಮವೆಂದು ಘೋಷಣೆ ಮಾಡಲಾಯಿತು.

ಗ್ರಾ ಪಂ ಅಧ್ಯಕ್ಷರು ಮಾತನಾಡಿ ಜಲಜೀವನ್ ಮಿಷನ್ ನ ಅನುಷ್ಠಾನ ಯಶಸ್ವಿಯಾಗಿದೆ . ಸರ್ಕಾರದ ಈ ಯೋಜನೆ ಗ್ರಾಮದ ಪ್ರತಿಯೋಬ್ಬರಿಗೂ ಶುದ್ಧ ಮತ್ತು ಸುರಕ್ಷಿತ ನೀರು ಒದಗಿಸಿ ಕೊಡಲು ಸಹಕಾರಿಯಾಗಿದೆ. ಆದುದರಿಂದ ಮೂರು ಗ್ರಾಮಗಳನ್ನು ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಲು ಸಂತೋಷವಾಗುತ್ತದೆ ಎಂದು ತಿಳಿಸಿದರು.

ಜಲಜೀವನ್ ಮಿಷನ್ ನ ಯೋಜನಾ ವ್ಯವಸ್ಥಾಪಕ ವಿಘ್ನೇಶ್ ರಾಜ್ˌ ಕಿರಿಯ ಅಭಿಯಂತರರು ಕೃಷ್ಣˌˌ ಇಂಜಿನಿಂಯರ್ ನಾಸಿರ್ˌಅನುಷ್ಠಾನ ಬೆಂಬಲ ಸಂಸ್ಥೆಯ ಚರಣ್ ರಾಜ್ˌ ಅನುಷ್ಠಾನ ಬೆಂಬಲ ಸಂಸ್ಠೆ - 2ನ ಸಿಬ್ಬಂದಿಗಳು ಉಪಸ್ಠಿತರಿದ್ದರು. ಪಂ ಅ. ಅಧಿಕಾರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment