Coastal Bulletin

ಹಿರಿಯ ಕಲಾವಿದರು ಹಾಗೂ ರಂಗಭೂಮಿಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿ ಕೃಷಿಯಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದು ಸಾಧನೆ ಮಾಡಿರುವಂತಹ ಹೊಸಕೋಟೆಯ ಹೆಸರಾಂತ ರಂಗಭೂಮಿ ಕಲಾವಿದರಾದ ಪ್ರಭುಸ್ವಾಮಿ ರವರಿಗೆ ಆಲನಹಳ್ಳಿಯಲ್ಲಿರುವ ಕುದೇರು ಶಾಖಾಮಠ ಆವರಣದಲ್ಲಿ ವೀರಶೈವ ಲಿಂಗಾಯಿತ ಸಮಾನ ಮನಸ್ಕರ ಸ್ನೇಹ ಬಳಗ ಕುದೇರು ಶಾಖಾಮಠ ಆಲನಹಳ್ಳಿ ಸಂಘದ ವತಿಯಿಂದ ಕಲಾ ಚಕ್ರವರ್ತಿ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗುರುಶಾಂತ ಮಹಾಸ್ವಾಮಿಗಳವರು ಹೊಸಕೋಟೆಯ ಹೊಸಕೋಟೆಯ ಹಿರಿಯ ಹೆಸರಾಂತ ಕಲಾವಿದರಾದ ಶ್ರೀ ಪ್ರಭುಸ್ವಾಮಿ ರವರು ಕಲೆಯಲ್ಲೇ ಆಗಲಿ ಅಥವಾ ಕೃಷಿಯ ಬೆಳೆಯ ಸಾಧನೆಯಲ್ಲಿ ಈಗಾಗಲೇ ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದು ನಮ್ಮ ಗ್ರಾಮೀಣ ಭಾಗಕ್ಕೆ ಮಾದರಿ ವ್ಯಕ್ತಿ ಎಂಬುದಕ್ಕೆ ತುಂಬ ಸಂತೋಷವಾಗುತ್ತದೆ ಇದೇ ರೀತಿ ಪ್ರಭುಸ್ವಾಮಿ ರವರ ಕಲೆ ಮತ್ತು ಕೃಷಿಯ ಮೇಲಿನ ಕಾಳಜಿ ಮತ್ತಷ್ಟು ಹೆಚ್ಚಲಿ ಇವರಿಂದ ಇನ್ನೂ ಅನೇಕರಿಗೆ ಇವರಿಂದ ಜಾಗೃತಿ ಮತ್ತು ಅರಿವು ಮೂಡುವಂತಾಗಲಿ ಎಂದು ತಿಳಿಸಿದರು. 

ನಂತರ ಮಾತನಾಡಿದ ಹೊಸಕೋಟೆ ಮಠದ  ಪೂಜ್ಯ ಶ್ರೀ ಗುರು ಸ್ವಾಮಿಗಳು ಪ್ರಭುಸ್ವಾಮಿ ಕಲೆ ಮತ್ತು ಖುಷಿಯಲ್ಲೇ ಸಾಧನೆ ಮಾಡಿರುವುದು ಪ್ರತಿಯೊಬ್ಬರಿಗೂ ತಿಳಿದಿದೆ ಆದರೆ ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ ಅವರು ತನ್ನ ತಂದೆ ತಾಯಿಗೆ ಮಾಡಿರುವಂತಹ ಸೇವೆ ನಾನು ಇದುವರೆಗೂ ಎಲ್ಲೂ ಸಹ ನೋಡಿರಲಿಕ್ಕೆ ಸಾಧ್ಯವೇ ಇಲ್ಲ ಈ ಪ್ರಶಸ್ತಿ ಎಲ್ಲದಕ್ಕಿಂತ ಹೆಚ್ಚಾಗಿ  ಈವರೆಗೆ

ಲಭಿಸಿರುವುದು ನನಗೆ ಅತ್ಯಂತ ಸಂತೋಷದ ಕ್ಷಣ ಎಂದು ನಾನು ಭಾವಿಸುತ್ತೇನೆ ಈ ಸಂಘದವರು ಇಂತಹ ಸಾಧನೆಯ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಬಿರುದು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ  ಇಂತಹ ಅನೇಕ ಕಾರ್ಯಕ್ರಮಗಳನ್ನು ಮಾಡಿ ಇನ್ನಷ್ಟು ಕಲಾವಿದರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಕಾರ್ಯಕ್ರಮಗಳನ್ನು ಮಾಡಿ ಎಂದು ತಮ್ಮಲ್ಲಿ  ಕೇಳಿಕೊಳ್ಳುತ್ತಿದ್ದಾರೆ .

ಇದೇ ಸಂದರ್ಭದಲ್ಲಿ ಕುದೇರು ಶಾಖಾಮಠ ಆಲನಹಳ್ಳಿಯ ಪೂಜ್ಯ ಶ್ರೀ ಗುರುಶಾಂತ ಮಹಾಸ್ವಾಮಿ ರವರು ಹಾಗೂ ಹೊಸಕೋಟೆಯ ಪೂಜ್ಯ ಶ್ರೀ ಗುರು ಸ್ವಾಮಿಗಳವರು ಹಾಗೂ ಸಂಘದ ಅಧ್ಯಕ್ಷರಾದ ಎಂ ಡಿ ಶಿವರಾಜು ಪ್ರಧಾನ ಕಾರ್ಯದರ್ಶಿಗಳಾದ ಗುರುಸ್ವಾಮಿ  ಹಾಗೂ ರಂಗಭೂಮಿ ನಿರ್ದೇಶಕರಾದ ಕೆರೆಹಳ್ಳಿ ಮಹದೇವಸ್ವಾಮಿ ಕಲಾವಿದರಾದ ದೊರೆಸ್ವಾಮಿ ಧನಂಜಯ ಮಧು ಚಿಕ್ಕಳ್ಳಿ ಪುಟ್ಟಣ್ಣ, ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್  ಪಾಪಣ್ಣ  ಮಹದೇವಪ್ರಸಾದ್ ಬಾಗಳಿ ಮಹೇಶ್ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಹಿರಿಯ ಕಲಾವಿದರು ಗಳು ಉಪಸ್ಥಿತರಿದ್ದರು.

Leave a Comment